ನವದೆಹಲಿ: ಇತ್ತೀಚಿಗೆ 61 ನೇ ವಯಸ್ಸಿನಲ್ಲಿ ಉದ್ಯಮಿಯಾಗಿರುವ ಗೌರಿ ಸ್ಪ್ರಾಟ್ ಅವರನ್ನು ಕೈಹಿಡಿದ ಬಾಲಿವುಡ್ ನಟ ಆಮಿರ್ ಖಾನ್ ವೈಯಕ್ತಿಕ ಜೀವನದ ಬಗ್ಗೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ನೀಡಿದ ಹೇಳಿಕೆಯಿಂದ ಹೊಸ ವಿವಾದ ಭುಗಿಲೆದ್ದಿತ್ತು. ಆಮಿರ್ ಖಾನ್"ಲವ್ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್ ಎಂದಿದ್ದರು.
ಇದೀಗ ತಪಸ್ವಿ ಛವಾನಿ ಮುಖ್ಯಸ್ಥ ಜಗದ್ಗುರು ಪರಮಹಂಸ ಆಚಾರ್ಯ ಅವರು ಸಚಿವರ ಹೇಳಿಕೆಯನ್ನು ಬೆಂಬಲಿಸುತ್ತಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಆಮಿರ್ ಖಾನ್ ಕೊಂದವರಿಗೆ 5 ಕೋಟಿ ರೂ. ಬಹುಮಾನ ನೀಡಲಾಗುವುದು ಮತ್ತು ಕಾನೂನು ವೆಚ್ಚಗಳನ್ನು ಸಹ ತಾವೇ ಭರಿಸಲಾಗುವುದು ಎಂದು ಘೋಷಿಸಿದ್ದಾರೆ.
ಆಮಿರ್ ಖಾನ್ ಹಿಂದೂ ಮಹಿಳೆಯರನ್ನು ಮದುವೆಯಾಗುವುದು ಲವ್ ಜಿಹಾದ್ ಗೆ ಪ್ರೇರಣೆಯಾಗಲಿವೆ. ಅಂತಹ ಕ್ರಮಗಳನ್ನು ಪ್ರೋತ್ಸಾಹಿಸದಿರಲು ಇಂತಹ ಕ್ರಮವೇ ಸೂಕ್ತ ಎಂದು ಹೇಳಿದ್ದಾರೆ.
