ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನಾ ದಿನವನ್ನು ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ವಿಕಾಸ ಸೇವಾ ಸಂಸ್ಥೆಯು ವಿಕಾಸ ಉದ್ಯೋಗ ಸೇತು ಎಂಬ ಬೃಹತ್ ಉದ್ಯೋಗ ಸಂದರ್ಶನ ಗುರುವಾರದಂದು ಕಾರ್ಕಳದ ವಿಕಾಸ ಕಛೇರಿಯಲ್ಲಿ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದೆ.
ಬೆಂಗಳೂರು, ಮಂಗಳೂರು ಉಡುಪಿ ಸೇರಿದಂತೆ ವಿವಿಧ ಭಾಗಗಳಿಂದ ಆಯ್ದ 25 ಕಂಪನಿಗಳಿಂದ ನೇರ ಸಂದರ್ಶನವನ್ನು ಆಯೋಜಿಸಲಾಗಿತ್ತು.
ಪ್ರಮುಖವಾಗಿ Foxconn, Chithara group, Sri Bhramari Creations Private Limited, Jaihind Tubes Private Limited, Manipal Technologies, Cogent, Praj-Genx, Bell-O-Seal, Toyota, Advith JCB, Reliance, Indo MDM, My TVS, ZF Rani, Meru info solutions, Vinayaka Engineering, Precision Tsugami, Spectrum Solutions, Prasanna Technologies, DQ System, Winman, Teleperformance, EcoPeak, Innova – System, M11 Energy Transition Private Limited ಈ ಕಂಪನಿಗಳು ಭಾಗವಹಿಸಿದ್ದವು.
1600ಕ್ಕೂ ಅಧಿಕ ಉದ್ಯೋಗಾರ್ಥಿಗಳು ಭಾಗಿಯಾಗಿದ್ದು, 360 ಕ್ಕೂ ಹೆಚ್ಚಿನ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಲಭಿಸಿದ್ದು, ಅವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. ಇನ್ನುಳಿದಂತೆ 240 ಕ್ಕೂ ಅಧಿಕ ಉದ್ಯೋಗಾರ್ಥಿಗಳನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತೆ ಕಂಪೆನಿ ಅವರನ್ನು ಕಂಪನಿಗೆ ಕರೆಸಿ ಸಂದರ್ಶನ ನಡೆಸಲಿದೆ.
ವಿಕಾಸ ಶಾಸಕರ ಕಛೇರಿ ಹಾಗೂ ರಾಮಮಂದಿರ ಎರಡೂ ಕಡೆಗಳಲ್ಲಿ ಏಕ ಕಾಲಕ್ಕೆ ಬೆಳಗ್ಗೆ 9.00 ರಿಂದ ಸಂಜೆ 5.30ರ ವರೆಗೆ ಸಂದರ್ಶನಗಳು ನಡೆದಿದ್ದು, ಉದ್ಯೋಗಾರ್ಥಿಗಳಿಗೆ ಸುವ್ಯವಸ್ಥಿತ ಸಭಾಂಗಣ, ಆಸನ, ಊಟ, ಚಾ - ತಿಂಡಿ ಸಹಿತ ಎಲ್ಲಾ ತರಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೊದಲೇ ನೋಂದಾವಣೆ ಮಾಡಿಕೊಂಡ ಉದ್ಯೋಗಾರ್ಥಿಗಳಿಗೆ ಸೂಕ್ತ ಮಾಹಿತಿ ಜೊತೆಗೆ ಎರಡು ದಿನಗಳ ಕಾಲ ಸಂದರ್ಶನ ಎದುರಿಸಲು ತರಬೇತಿಯನ್ನು ನೀಡಲಾಗಿತ್ತು.



