
ಬ್ರಹ್ಮಾವರ ಹಾವಂಜೆ ಗ್ರಾಮದಲ್ಲಿ ಪೇಟೆಗೆ ತೆರಳಿದ್ದ ಯುವತಿ ನಾಪತ್ತೆ
Wednesday, January 18, 2023
ಬ್ರಹ್ಮಾವರ (Headlineskannada): ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮದ ಗೋಳಿಕಟ್ಟೆ ನಿವಾಸಿ 18ವರ್ಷದ ಆಶಾ ಎಂಬ ಯುವತಿಯು ಡಿಸೆಂಬರ್ 17 ರಂದು ಮನೆಯಿಂದ ಹೊರಗೆ ಹೋದವರು, ಈವರೆಗೂ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.