ಸಮಾಜಸೇವಕ ಜಲಾಲುದ್ದೀನ್ ಉಚ್ಚಿಲರನ್ನು ಸನ್ಮಾನಿಸಿದ ವಿನಯ್ ಕುಮಾರ್ ಸೊರಕೆ

ಸಮಾಜಸೇವಕ ಜಲಾಲುದ್ದೀನ್ ಉಚ್ಚಿಲರನ್ನು ಸನ್ಮಾನಿಸಿದ ವಿನಯ್ ಕುಮಾರ್ ಸೊರಕೆ

ಕಾಪು(Headlines Kannada): ಇಲ್ಲಿನ ಉಚ್ಚಿಲ ಆಸುಪಾಸಿನಲ್ಲಿ ಯಾವುದೇ ಅಪಘಾತ, ಸಮಸ್ಯೆ ಆದರೂ ಜಾತಿ ಭೇದವಿಲ್ಲದೆ, ಹಗಲು-ರಾತಿ ಎನ್ನದೆ ಘಟನಾ ಸ್ಥಳಕ್ಕೆ ಆಗಮಸಿ ಯಾವುದೇ ಫಲಾಪೇಕ್ಷೆ ಇಲ್ಲದೆ  ಸ್ಪಂದಿಸುವ ಸಮಾಜಸೇವಕ ಜಲಾಲುದ್ದೀನ್ ಉಚ್ಚಿಲ ಇವರಿಗೆ ಕಾಪು ಕಾಂಗ್ರೆಸ್ ಸಮಿತಿಯ ಸನ್ಮಾನಿಸಲಾಯಿತು.

ಕಾಪು ರಾಜೀವ ಭವನದಲ್ಲಿ ಗುರುವಾರ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಸಮ್ಮುಖದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಲವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಉಚ್ಚಿಲ ಸುತ್ತಮುತ್ತ ಯಾವುದೇ ಅಪಘಾತ ಆದರೂ ಕ್ಷಣಾರ್ಧದಲ್ಲಿ ತಲುಪುವ ಜಲಾಲುದ್ದೀನ್, ಅವರನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸುವ ಕಾಯಕವನ್ನು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಜಾತಿ-ಧರ್ಮವನ್ನು ನೋಡದೆ ಅಪಘಾತಕ್ಕೀಡಾದ ಅದೆಷ್ಟೋ ಮಂದಿಯನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ್ದಾರೆ.ಇವರನ್ನು ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. 

ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಆಚಾರ್ಯ, ಗಿರೀಶ್ ಪಲಿಮಾರು, ಪೌರ ಕಾರ್ಮಿಕರನ್ನು, ನಿವೃತ್ತ ಸೈನಿಕರನ್ನು, ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.  ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡ ಶೇಖಬ್ಬ ಉಚ್ಚಿಲ, ಶರ್ಫುದ್ದೀನ್, ರಝಕ್ ಬಗ್ಗತೋಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article