ಉಡುಪಿ ಕುಂಜಿಬೆಟ್ಟುವಿನಲ್ಲಿ ಕೋಳಿ ಅಂಕ ಅಡ್ಡೆಗೆ ದಾಳಿ: 15 ಮಂದಿ ಪೊಲೀಸ್ ವಶಕ್ಕೆ
Saturday, March 2, 2024
ಉಡುಪಿ: ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಹಿಂಭಾಗದ ಮೈದಾನ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಿಶೋರ್, ಅಶೋಕ, ಸದಾನಂದ, ಧನರಾಜ್, ಸಂದೀಪ, ಸಂದೀಪ, ವೀರೇಂದ್ರ, ನಿಖಿಲ್, ರಕ್ಷಿತ್, ಸುಜಿತ್, ಸುದೀಪ್, ಲತೀಶ್, ಶರತ್, ಸನತ್, ಪ್ರಶಾಂತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅವರಿಂದ 4 ಹುಂಜ, ಆಟಕ್ಕೆ ಬಳಸಿದ 2000 ರೂ. ನಗದು ಮತ್ತು ಕೋಳಿ ಅಂಕಕ್ಕೆ ಬಳಸುವ ಚೂರಿ ಹಾಗೂ 14 ದ್ವಿಚಕ್ರ ವಾಹನಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.