
ಹಾವಂಜೆ: ಫ್ಯಾನ್ಸಿ ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ!
Wednesday, May 15, 2024
ಉಡುಪಿ: ಫ್ಯಾನ್ಸಿ ಅಂಗಡಿಗೆ ಕೆಲಸಕ್ಕೆ ಹೋದ ಯುವತಿಯೋರ್ವಳು ಮನೆಗೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾಳೆ.
ಹಾವಂಜೆ ಗೋಳಿಕಟ್ಟೆಯ ಆಶಾ (21) ನಾಪತ್ತೆಯಾದ ಯುವತಿ. ಸೋಮವಾರ ಬೆಳಿಗ್ಗೆ ತಾನು ಕೆಲಸ ಮಾಡುವ ಪೆರ್ಡೂರಿನ ಫ್ಯಾನ್ಸಿ ಅಂಗಡಿಗೆ ಹೋದವರು ಅಂಗಡಿ ಮಾಲೀಕರ ಬಳಿ ತನಗೆ ಆರೋಗ್ಯ ಸರಿಯಿಲ್ಲ, ಔಷಧ ಪಡೆಯಲು ಹೋಗಬೇಕಾಗಿದೆ ಎಂದು ಹೇಳಿ ರಜೆ ತೆಗೆದುಕೊಂಡು ಹೊರಟಿದ್ದರು. ಆದರೆ ಈವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.