ಸುಬ್ರಮಣ್ಯ : ಇಲ್ಲಿನ ನೆಟ್ಟನ ನಿವಾಸಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಎಂ ಎ ಅಬ್ಬಾಸ್ ಹಾಜಿ ರವರ ನಿಧನಕ್ಕೆ ಯುವ ಮುಂದಾಳು , ಕೆಪಿಸಿಸಿ ಸಂಘಟಕರಾದ ಅನ್ಸಾಫ್ ರವರು ಸಂತಾಪ ಸೂಚಿಸಿದ್ದಾರೆ.
ಅಬ್ಬಾಸ್ ಹಾಜಿ ರವರಿಗೆ 81 ವರ್ಷ ವಯಸ್ಸಾಗಿತ್ತು. ದಿವಂಗತರು ಪತ್ನಿ , ಒಬ್ಬ ಗಂಡು ಹಾಗೂ ಮೂರು ಹೆಣ್ಣುಮಕ್ಕಳು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.