ಶಿರ್ವ: ಇಲ್ಲಿನ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಶಿರ್ವ ಇಲ್ಲಿಯ ವಿದ್ಯಾರ್ಥಿ ಮಹಮ್ಮದ್ ಮಾಝಿನ್ ಅವರು ಕರಾಟೆ ಕ್ರೀಡಾಕೂಟದಲ್ಲಿ ತೀವ್ರ ಕಠಿಣ ಪರಿಶ್ರಮದ ಫಲವಾಗಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಇಂದು ಆಯೋಜಿಸಿದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ತಮ್ಮ ಆಯ್ಕೆಯನ್ನು ಖಚಿತ ಪಡಿಸಿಕೊಂಡಿದ್ದಾರೆ. ಇವರು ಕರಾಟೆ ಪರಿವೀಕ್ಷಕ ಸಂಶುದ್ದೀನ್ ಶೇಖ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಅವರ ಈ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

