ಏಷ್ಯಾಕಪ್: ಅಭಿಷೇಕ್ ಶರ್ಮಾ ಆರ್ಭಟ; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಮತ್ತೆ ಬಗ್ಗು ಬಡಿದಿದ್ದು, ಸೂಪರ್ 4 ಹಂತದ ಪಂದ್ಯದಲ್ಲಿ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ.
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಸಾಹಿಬ್‌ಜಾದಾ ಫರ್ಹಾನ್ (58 ರನ್) ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 171ರನ್ ಪೇರಿಸಿ ಭಾರತಕ್ಕೆ ಗೆಲ್ಲಲು 172 ರನ್ ಗಳ ಸವಾಲಿನ ಗುರಿ ನೀಡಿತ್ತು.
ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದ ಅಭಿಷೇಕ್ ಶರ್ಮಾ ಮತ್ತು ಉಪನಾಯಕ ಶುಭಮನ್ ಗಿಲ್ ಅವರ ಸ್ಫೋಟಕ ಇನ್ನಿಂಗ್ಸ್ ನ ನೆರವಿನಿಂದ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಏಷ್ಯಾ ಕಪ್ ನ ಸೂಪರ್ ಸಿಕ್ಸ್ ನ ತನ್ನ ಮೊದಲ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದು ಬೀಗಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು. ಇದನ್ನು ಭಾರತ ತಂಡ ಯಾವುದೇ ವಿಕಟ್ ನಷ್ಟವಿಲ್ಲದೆ ಇನ್ನೂ 7 ಎಸೆತಗಳು ಬಾಕಿ ಉಳಿದಿರುವಂತೆ ಬೆಂಬತ್ತಿ ವಿಜಯಭೇರಿ ಬಾರಿಸಿತು. ಆರಂಭಿಕ ಬ್ಯಾಟರ್ ಗಳಾದ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಭಾರತಕ್ಕೆ ಅದ್ಬುತ ಆರಂಭ ನೀಡಿದರು. ಕಳೆದ ಪಂದ್ಯದಲ್ಲಿ ಶಾಹಿನ್ ಶಾ ಅಫ್ರಿದಿ ಅವರ ಮೊದಲ ಎಸೆತವನ್ನು ಅಭಿಷೇಕ್ ಶರ್ಮಾ ಬೌಂಡರಿಗಟ್ಟಿದ್ದರು. ಈ ಬಾರಿ ಬೌನ್ಸರ್ ಆಗಿ ಬಂದ ಪ್ರಥಮ ಎಸೆತವನ್ನು ಲೆಗ್ ಲಾಂಗ್ ಕಡೆಗೆ ಸಿಕ್ಸರ್ ಗೆತ್ತಿದರು. ಅಲ್ಲಿಗೇ ಪಾಕಿಸ್ತಾನದ ಜಂಘಾಬಲ ಉಡುಗಿತ್ತು.
ಗಿಲ್ - ಅಭಿಷೇಕ್ ಶತಕದ ಜೊತೆಯಾಟ
ಇವರಿಬ್ಬರು 9.5 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 105 ರನ್ ಗಳ ಮಹತ್ವದ ಜೊತೆಯಾಟ ಆಡಿದ್ದು ಪಂದ್ಯವನ್ನು ಸಂಪೂರ್ಣವಾಗಿ ಪಾಕಿಸ್ತಾನದ ಕೈಯಿಂದ ಕಿತ್ತುಕೊಂಡಿತು. ಅದಾಗಲೇ ಅರ್ಧಶತಕ ಗಳಿಸಿದ ಅಭಿಷೇಕ್ ಶರ್ಮಾ ಮತ್ತು ಅರ್ಧಶತಕದ ಸನಿಹ ಇದ್ದ ಶುಭಮನ್ ಗಿಲ್(28 ಎಸೆತದಲ್ಲಿ 47 ರನ್) ಅವರು ಮೈದಾನದ ಮೂಲೆಮೂಲೆಗೂ ಚೆಂಡನ್ನಟ್ಟಿ ಪಾಕಿಸ್ತಾನದ ಫೀಲ್ಡರ್ ಗಳ ಬೆವರಿಳಸಿದ್ದರು. ಆದರೆ 10ನೇ ಓವರ್ ನಲ್ಲಿ ಶುಭಮನ್ ಗಿಲ್ ಅವರನ್ನು ಫಹೀಮ್ ಅಶ್ರಫ್ ಅವರು ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಭಾರತದ ಮೊದಲ ವಿಕೆಟ್ ಪತನಕ್ಕೆ ಕಾರಣರಾದರು. ಮುಂದಿನ ಓವರ್ ನಲ್ಲೇ ನಾಯಕ ಸೂರ್ಯಕುಮಾರ್ ಅವರನ್ನು ಹ್ಯಾರಿಸ್ ರೌಫ್ ಅವರು ಖಾತೆ ತೆರೆವ ಮೊದಲೇ ಅಬ್ರಾರ್ ಅಹ್ಮದ್ ಅವರಿಗೆ ಕ್ಯಾಚ್ ಕೊಡಿಸಿದರು.