ಕಾಪು: ಇಲ್ಲಿನ ದಂಡತೀರ್ಥ ಶಾಲೆಯ ಮುಂಭಾಗದಲ್ಲಿ ಸ್ಕೂಟಿಯೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತ ಯುವಕನ ಉಡುಪಿ ಕಲ್ಯಾಣಪುರದ ಅನುಷ್ ಕರುಣಾಕರ ಭಂಡಾರಿ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 10.45ರ ಸುಮಾರಿಗೆ ಉಡುಪಿ ಕಡೆ ಹೋಗುತ್ತಿದ್ದ ವೇಳೆ ಸ್ಕೂಟಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದ ತೀವ್ರತೆಗೆ ಮೃತನ ದೇಹಗಳು ಚೆಲ್ಲಾಪಿಲ್ಲಿಯಾಗಿತ್ತು. ಈ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗು ಮೂಳೂರು SDPI ಅಂಬ್ಯುಲೆನ್ಸ್ ಚಾಲಕ ಹಮೀದ್ NH ಪೋಲೀಸರ ಸಹಾಯದಿಂದ ಚೆಲ್ಲಾಪಿಲ್ಲಿಯಾದ ಮೃತದೇಹವನ್ನು ಎತ್ತಿ ಹಾಕಿ SDPI ಅಂಬ್ಯುಲೆನ್ಸ್ ಮೂಲಕ ಅಜ್ಜರಕಾಡು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
