ಬಂಟ್ವಾಳ; ಈಶ್ವರ್ ಖಂಡ್ರೆ ಅಭಿಮಾನಿ ಬಳಗ "ಟೀಂ ಖಂಡ್ರೆ ವಿದ್ ಇಂಟಿಗ್ರಿಟಿ" ವತಿಯಿಂದ ಬ್ಯಾರಿಕೇಡ್ ಲೋಕಾರ್ಪಣೆ

ಬಂಟ್ವಾಳ; ಈಶ್ವರ್ ಖಂಡ್ರೆ ಅಭಿಮಾನಿ ಬಳಗ "ಟೀಂ ಖಂಡ್ರೆ ವಿದ್ ಇಂಟಿಗ್ರಿಟಿ" ವತಿಯಿಂದ ಬ್ಯಾರಿಕೇಡ್ ಲೋಕಾರ್ಪಣೆ

ಮಂಗಳೂರು: ಈಶ್ವರ್ ಖಂಡ್ರೆ ಅವರ ಅಭಿಮಾನಿ ಎ.ಕೆ.ಅನ್ಸಾಫ್ ಅವರ ನೇತೃತ್ವದ ಟೀಂ ಖಂಡ್ರೆ ವಿದ್ ಇಂಟಿಗ್ರಿಟಿ ವತಿಯಿಂದ ಬಂಟ್ವಾಳ ತಾಲೂಕು ಕೋಳ್ನಾಡು ಗ್ರಾಮದ ಸುರಿಬೈಲು ಸರಕಾರಿ ಶಾಲೆಯ ಗೇಟ್ ಮುಂಭಾಗದ ರಸ್ತೆಗೆ ಮಕ್ಕಳ ಸುರಕ್ಷತಾ ದೃಷ್ಠಿಕೋನದಿಂದ ಬ್ಯಾರಿಕೇಡ್ ಆಳವಡಿಸಲಾಯಿತು.

ಈ ಸಂಧರ್ಭ ಅಭಿಪ್ರಾಯ ಹಂಚಿದ ಟೀಂ ಖಂಡ್ರೆ ವಿದ್ ಇಂಟಿಗ್ರಿಟಿಯ ಮುಂದಾಳು ಎ.ಕೆ.ಅನ್ಸಾಫ್ ಅವರು, ಕನ್ನಡ ನಾಡು ಕಂಡ ಅತ್ಯುತ್ತಮ ಆಡಳಿತ ತಜ್ಙ, ಹಾಲಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಸರ್ ಅವರ ತತ್ವ ಆದರ್ಶಕ್ಕೆ ಪ್ರಭಾವಿತನಾಗಿ ಅವರ ಕನಸಾಗಿರುವ ಸಮಸಮಾಜದ ಕಲ್ಪನೆಯನ್ನು ಸಾದರಪಡಿಸಲು "ಟೀಂ ಖಂಡ್ರೆ ವಿದ್ ಇಂಟಿಗ್ರಿಟಿ" ಎಂಬ ತಂಡ ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ನಾವು ಅಳಿಲು ಸೇವೆ ಮಾಡುತ್ತಿದ್ದೇವೆ. ಯಾವುದೇ ರಂಗದಲ್ಲಿ ನೀವು ಇದ್ದರೂ "ನಡೆಸಿ ಕೊಡಲು ಸಾಧ್ಯ ಇರೋದನ್ನು ಮಾತ್ರ ನುಡಿಯಿರಿ" ಎಂದಾಗಿದೆ ನಮ್ಮ ಆದರಣಿಯ ಖಂಡ್ರೆ ಸರ್ ಅವರು ಅಭಿಮಾನಿಗಳಾದ ನಮಗೆ ಹೇಳಿ ಕೊಟ್ಟಿರುವಂತಹ ಕಿವಿ ಮಾತು. ಅದರಂತೆಯೇ ಸುಮಾರು ಏಳು ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ವ್ಯಾಸಂಗ ಮಾಡುವ ಸುರಿಬೈಲು ಶಾಲೆಯ ವಠಾರಕ್ಕೆ ಬ್ಯಾರಿಕೇಡ್ ಅವಶ್ಯಕತೆ ಇದೆ ಎಂದು ಶಾಲಾಭಿವೃದ್ದಿ ಸಮಿತಿಯ ಸಂಚಾಲಕರೂ, ನನ್ನ ಆತ್ಮಿಯ ಗೆಳೆಯರೂ ಆದ, ಶಾಲೆಯ ಬಗೆ ವಿಶೇಷ ಕಾಳಜಿಯುಳ್ಳ ಅಬ್ದುಲ್ ರಝಾಕ್ ಅವರು ಮನವಿ ಮಾಡಿದ್ದರು. ಈ ವೇಳೆ ಅದಕ್ಕೆ ಬೇಕಾದ ವ್ಯವಸ್ತೆ ಕಲ್ಪಿಸುತ್ತೇನೆ ಎಂಬ ವಚನ ನೀಡಿ ಅದರಂತೆ ಇದೀಗ ನೆರವೇರಿಸಲು ಅವಕಾಶ ಆಗಿದೆ. ನಾಡಿನ ಭವಿಷ್ಯ ಬೆಳಗುವ ಮಕ್ಕಳ ಭದ್ರತೆಗೆ ಸಂಬಂಧಪಟ್ಟು ನಾವೆಲ್ಲರೂ ಇಂದು ಇಲ್ಲಿ ಜತೆಯಾಗಿದ್ದೇವೆ. ಇದು ಬರೀ ಬ್ಯಾರಿಕೇಡ್ ಲೋಕಾರ್ಪಣೆ ಅಲ್ಲ, ಸುರಿಬೈಲು ನಾಡಿನ ಭವಿಷ್ಯದ ಮಕ್ಕಳ ಭದ್ರತೆ ಹಾಗೂ ಕಾಳಜಿಯ ಧ್ಯೋತಕ ಎಂದು ಬಣ್ಣಿಸಲು ಬಯಸುತ್ತೇನೆ ಎಂದರು.




ಈ ವೇಳೆ  ಶಾಲಾಭಿವೃದ್ದಿ ಸಮಿತಿ ವತಿಯಿಂದ ಎ.ಕೆ.ಅನ್ಸಾಫ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಕರು ಹಾಗೂ ಸುಲ್ತಾನ್ ಸ್ಪೋರ್ಟ್ಸ್ ಸುರಿಬೈಲ್, ಹಳೆ ವಿದ್ಯಾರ್ಥಿ ಬಳಗ ಸುರಿಬೈಲ್ ಶಾಲೆ ಸದಸ್ಯರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article