
ಕೊಣಾಜೆ ಸಮೀಪದ ಬಾಳೆಪುಣಿ ಮುದುಂಗಾರುಕಟ್ಟೆ ಬಳಿ ಯುವಕನೊರ್ವನ ಮೃತದೇಹ ಪತ್ತೆ
Tuesday, October 14, 2025
ಮಂಗಳೂರು: ಕೊಣಾಜೆ ಸಮೀಪದ ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ ಬಸ್ ನಿಲ್ದಾಣದ ಸಮೀಪ ಮಂಗಳವಾರ ಮಧ್ಯಾಹ್ನ ಯುವಕನೊರ್ವನ ಮೃತದೇಹ ಪತ್ತೆಯಾಗಿದೆ.
ಪತ್ತೆಯಾದ ಮೃತ ಯುವಕನನ್ನು ಮುದುಂಗಾರುಕಟ್ಟೆಯ ಸಮೀಪದ ಪಾತೂರಿನ ಮುಹಮ್ಮದ್ ನಿಯಾಫ್ ( 28) ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ದ್ವಿಚಕ್ರವಾಹನವನ್ನು ನಿರ್ಜನ ಪ್ರದೇಶದ ಬಸ್ ನಿಲ್ದಾಣದ ಬಳಿ ಇಡಲು ಹೋದಾಗ ಮೃತದೇಹ ಪತ್ತೆಯಾಗಿದ್ದು, ನಿಯಾಫ್ ಬಾವಿಯ ರಿಂಗ್ ತಯಾರಿಕೆ ಹಾಗೂ ಇತರ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಿಯಾಫ್ ಕಳೆದ ಹಲವು ತಿಂಗಳ ಹಿಂದೆ ಮುದುಂಗಾರುಕಟ್ಟೆಯ ಬಳಿ ಮಹಿಳೆಯರ ಸರವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ದ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.