‘ಉಡುಪಿ ಉಚ್ಚಿಲ ದಸರಾ’ಕ್ಕೆ ನಟ ಕೋಮಲ್ ಸೇರಿದಂತೆ ಗಣ್ಯರ ಭೇಟಿ

‘ಉಡುಪಿ ಉಚ್ಚಿಲ ದಸರಾ’ಕ್ಕೆ ನಟ ಕೋಮಲ್ ಸೇರಿದಂತೆ ಗಣ್ಯರ ಭೇಟಿ

ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಕರಾವಳಿಯ ನಾಡಹಬ್ಬ ‘ಉಡುಪಿ ಉಚ್ಚಿಲ ದಸರಾ’ ಕೊನೆಯ ಹಂತಕ್ಕೆ ತಲುಪಿದ್ದು, ಜನ ಸಾಗರವೇ ಹರಿದು ಬರುತ್ತಿದೆ.

ಬೆಳಗ್ಗೆಯಿಂದ ರಾತ್ರಿಯ ವರಗೆ ಭಕ್ತಾಧಿಗಳ ದಂಡೇ ದಸರಾದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿದೆ. ಇಲ್ಲಿನ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ತನ್ನತ್ತ ಸೆಳೆಯುತ್ತಿದೆ.

ಮಂಗಳವಾರ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಜಸ್ಟೀಸ್ ಎಂ.ಜಿ. ಉಷಾ ಅವರು ಶ್ರೀ ಕ್ಷೇತ್ರದಾಳಿ ನಡೆಯುತ್ತಿರುವ ದಸರಾಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಅವರನ್ನು ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧ‌ರ್ ಸುವರ್ಣ, ಪ್ರಧಾನ ಅರ್ಚಕ ವೇ|ಮೂ। ರಾಘವೇಂದ್ರ ಉಪಾಧ್ಯಾಯ, ದಸರಾ ಸಮಿತಿ ಮಹಿಳಾ ಸಂಚಾಲಕಿ ಸಂಧ್ಯಾ ದೀಪ ಸುನಿಲ್, ದಿನೇಶ್ ಎರ್ಮಾಳು, ಮೋಹನ್ ಬಂಗೇರ ಮತ್ತಿತರರು ಪ್ರಸಾದದೊಂದಿಗೆ ಗೌರವಿಸಿದರು. 

ಅನಂತರ ಕನ್ನಡದ ಖ್ಯಾತ ನಟ ಕೋಮಲ್ ಭೇಟಿ ನೀಡಿದರು. ಅವರನ್ನು ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

Ads on article

Advertise in articles 1

advertising articles 2

Advertise under the article