ಮಂಗಳೂರಿನ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ MBBS ಮೆರಿಟ್ ಸೀಟ್ ಪಡೆದ ಮೊಹಮ್ಮದ್ ಇಸ್ಮಾಯಿಲ್ ಹಿಶಾಮ್ ಅವರನ್ನು ಮಂಗಳವಾರ ಅಂತಾರಾಷ್ಟ್ರೀಯ ಪ್ರೇರಣಾ ಭಾಷಣಗಾರ ಹಾಗು ತರಬೇತಿದಾರ ರಫೀಕ್ ಮಾಸ್ಟರ್ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಬ್ದುಲ್ ಹಕೀಮ್ ಪ್ರಿಂಟೆಕ್ ಹಾಗು ಸೌಧಾ ಅವರ ಹೆಮ್ಮೆಯ ಪುತ್ರರಾಗಿರುವ ಮೊಹಮ್ಮದ್ ಇಸ್ಮಾಯಿಲ್ ಹಿಶಾಮ್, ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಆಕಾಶ್ ಇನ್ಸ್ಟಿಟ್ಯೂಟ್ನ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಭಾರತರತ್ನ ಡಾ. ಎ ಪಿ ಜೆ ಅಬ್ದುಲ್ ಕಲಾಂ ಸೋಷಿಯಲ್ ಡೆವಲಪ್ಮೆಂಟ್ ಫೌಂಡೇಶನ್ (ರಿ) ಅಧ್ಯಕ್ಷ ಸೀತಾರ್ ಅಬ್ದುಲ್ ಮಜೀದ್ ಹಾಜಿ ಉಪಸ್ಥಿತರಿದ್ದರು.
