ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇನ್ನು ಮುಂದೆ ಇಡೀ ದಿನ ಕೃಷ್ಣದರ್ಶನಕ್ಕೆ ವ್ಯವಸ್ಥೆ
Tuesday, January 20, 2026
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶಿರೂರು ಮಠದ ಪರ್ಯಾಯ ಮಹೋತ್ಸವ ಆರಂಭವಾಗಿದೆ. ಉಡುಪಿ ಕೃಷ್ಣನ ದರ್ಶನವನ್ನು ಇನ್ನು ಮುಂದೆ ಸುಲಭವಾಗಿ ಮಾಡಬಹುದು.
ಸುದೀರ್ಘ ಸರತಿ ಸಾಲಿನಲ್ಲಿ ಇನ್ನು ಮುಂದೆ ನಿಲ್ಲಬೇಕಾಗಿಲ್ಲ. ನೇರವಾಗಿ ಮುಂಭಾಗದಿಂದಲೇ ಕೃಷ್ಣದರ್ಶನಕ್ಕೆ ಹೋಗಬಹುದು. ಒಂದು ವೇಳೆ ಜನಸಂದಣಿ ಹೆಚ್ಚಾದರೆ ನಿಭಾಯಿಸಲು ಕಟ್ಟಿಗೆ ರಥದಿಂದ ಸರತಿಯ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಇನ್ನು ದೇವರ ದರ್ಶನ ಮುಂಜಾನೆ ನಾಲ್ಕು ಗಂಟೆಯಿಂದ ರಾತ್ರಿ 11:00ವರೆಗೆ ಆಭಾದಿತವಾಗಿ ನಡೆಯಲಿದೆ. ನಡುರಾತ್ರಿ ಕೇವಲ ಐದು ಗಂಟೆಗಳ ಕಾಲ ಮಾತ್ರ ಕೃಷ್ಣಮಠ ಮುಚ್ಚಿ ಇರಲಿದೆ. ಉಳಿದಂತೆ ಯಾವುದೇ ಸಮಯದಲ್ಲಿ ಕೃಷ್ಣದೇವರ ದರ್ಶನ ಮಾಡಬಹುದು.