ರಾಮಚಂದ್ರರಾವ್ ರಾಸಲೀಲೆ ಪ್ರಕರಣದ ಬಗ್ಗೆ ಗೃಹಸಚಿವ ಡಾ.ಪರಮೇಶ್ವರ್‌ ಹೇಳಿದ್ದೇನು...?

ರಾಮಚಂದ್ರರಾವ್ ರಾಸಲೀಲೆ ಪ್ರಕರಣದ ಬಗ್ಗೆ ಗೃಹಸಚಿವ ಡಾ.ಪರಮೇಶ್ವರ್‌ ಹೇಳಿದ್ದೇನು...?

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಜಿ. ಪರಮೇಶ್ವರ್‌, ಇಂತಹ ಘಟನೆಗಳು ಯಾರಿಗೂ ಗೌರವ ತರೋದಿಲ್ಲ. ಹಾಗಾಗಿ ಎಷ್ಟೇ ದೊಡ್ಡವರಿದ್ದರೂ ಮುಲಾಜಿಲ್ಲದೇ ಕ್ರಮ ಆಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ (Bengaluru) ತಮ್ಮ ನಿವಾಸದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನನಗೆ ಹುಷಾರಿರಲಿಲ್ಲ, ಮಲಗಿದ್ದೆ. ಮಧ್ಯಾಹ್ನ ಊಟಕ್ಕೆ ಎದ್ದಾಗ ಹೇಳಿದ್ರು. ಆಮೇಲೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದೆ. ಪೊಲೀಸ್ ಇಲಾಖೆ ಮಾತ್ರ ಅಲ್ಲ ಯಾವುದೇ ಇಲಾಖೆಯಲ್ಲೂ ಇಂಥ ಘಟನೆಗಳನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸಿಎಂ ಕೂಡ ಅಪ್ಸೆಟ್‌ ಆಗಿದ್ದಾರೆ. ಹಾಗಾಗಿ ಎಷ್ಟೇ ದೊಡ್ಡವರಿರಲಿ, ಹಿರಿಯರಿರಲಿ ಕ್ರಮ ಆಗಬೇಕು ಅಂತ ಹೇಳಿದೆ. ಅದಕ್ಕೆ ಸಿಎಂ ಕೂಡ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ರು. ಅಲ್ಲದೇ ಇಂತಹ ಕಠಿಣ ಸನ್ನಿವೇಶದಲ್ಲಿ ನಾವು ಕಠಿಣವಾಗಿಯೇ ಇರಬೇಕಾಗುತ್ತದೆ. ಹಾಗಾಗಿ ನಿನ್ನೆ ನಾನು ಅವರನ್ನ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂಗೆ ವಿಷಯ ತಿಳಿಸುತ್ತಿದ್ದಂತೆ ತಕ್ಷಣ ಅವರನ್ನ ಅಮಾನತು ಮಾಡಿ ತನಿಖೆ ಮಾಡೋದಕ್ಕೆ ಹೇಳಿದರು. ಆದ್ರೆ ರಾಮಚಂದ್ರ ರಾವ್‌ ಸುಳ್ಳು ಅಂತ ಹೇಳಿದ್ದಾರೆ. ಅದನ್ನ ಪರಿಶೀಲಿಸೋಣ. ಇಂತಹ ಘಟನೆಗಳು ಯಾರಿಗೂ ಗೌರವ ತರೋದಿಲ್ಲ ಅಂತ ಹೇಳಿ ಈಗ ಅಮಾನತು ಮಾಡಿದ್ದೇವೆ. ಮುಂದೆ ತನಿಖೆ ಆಗುತ್ತದೆ. ಅದರ ಬೇರೆ ಬೇರೆ ಆಯಾಮಗಳು ಏನಿದೆ ಅದರ ಮೇಲೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದರು.

ಇನ್ನೂ ರಾಮಚಂದ್ರ ರಾವ್‌ ಬಂಧಿಸಬೇಕೆಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿ, ತಕ್ಷಣಕ್ಕೆ ಕ್ರಮ ತಗೊಂಡಿದ್ದೇವೆ, ತನಿಖೆ ಆದ್ಮೇಲೆ ಏನು ಬೇಕಾದರೂ ಆಗಬಹುದು. ಅವರು ಡಿಸ್‌ಮಿಸ್‌ ಕೂಡ ಆಗಬಹುದು. ತಕ್ಷಣಕ್ಕೆ ಆಕ್ಷನ್ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಅಮಾನತು ಮಾಡಿದ್ದೇವೆ. ಯಾವುದೇ ಮುಲಾಜಿ ಇಲ್ಲದೇ ಸೀನಿಯರ್ ಆಫೀಸರ್ ಅನ್ನೋದನ್ನೂ ನೋಡದೆ ಕ್ರಮ ತೆಗೆದುಕೊಂಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅಂತ ವಿವರಿಸಿದರು.

Ads on article

Advertise in articles 1

advertising articles 2

Advertise under the article