ಮೂಳೂರು ಅಲ್-ಇಹ್ಸಾನ್ ಕಾಲೇಜಿನಲ್ಲಿ ನಡೆದ SSLC ವಿದ್ಯಾರ್ಥಿಗಳ ಕಾರ್ಯಾಗಾರ ಉದ್ಘಾಟಿಸಿದ ಮುಸ್ತಫಾ ಸಅದಿ
ಕಾಪು: ಮುಸ್ಲಿಂ ಎಜುಕೇಶನಲ್ ಇನ್ಸಿಟ್ಯೂಷನ್ (MEIF) ಉಡುಪಿ ಘಟಕ, ಅಲ್-ಇಹ್ಸಾನ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸಿಟ್ಯೂಷನ್ ಡಿಕೆಎಸ್‌ಸಿ ಮೂಳೂರು ಮತ್ತು ಜಂಇಯ್ಯತುಲ್ ಫಲಾಹ್ ಕಾಪು ಶಾಖೆಯ ಸಹಯೋಗದೊಂದಿಗೆ ಬುಧವಾರ ಅಲ್-ಇಹ್ಸಾನ್ ಕಾಲೇಜು ಆಡಿಟೋರಿಯಂನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಅಲ್-ಇಹ್ಸಾನ್ ನ ಪ್ರಧಾನ ವ್ಯವಸ್ಥಾಪಕರಾದ ಮೌಲಾನಾ ಯು.ಕೆ.ಮುಸ್ತಫಾ ಸಅದಿ ಉದ್ಘಾಟಿಸಿದರು.
ಮೀಫ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಮೊಹಮ್ಮದ್ ಅಕ್ರಮ್ ಮೌಲಾ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀಫ್ ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾದ ಶಬೀ ಅಹ್ಮದ್ ಖಾಝಿ, ಜಂಇಯ್ಯತುಲ್ ಫಲಾಹ್ ಕಾಪು ಶಾಖೆಯ ಅಧ್ಯಕ್ಷರಾದ ಮೊಹಮ್ಮದ್ ಇಕ್ಸಾಲ್, ಅಲ್-ಇಹ್ಸಾನ್ ಚೀಫ್ ಅಡ್ವೈಝರ್ ಅನ್ವರ್ ಹುಸೇನ್ ಗೂಡಿನಬಳಿ, ಮೀಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸ್ಲಂ ಹೈಕಾಡಿ, ಅಲ್-ಇಹ್ಸಾನ್ ಕ್ಯಾಂಪಸ್ಸಿನ ಮುಖ್ಯಾಧಿಕಾರಿಗಳಾದ ಪ್ರೊ.ಯೂಸುಫ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾದ ರಾಷ್ಟ್ರ ಶಿಕ್ಷಕ ಪ್ರಶಸ್ತಿ ವಿಜೇತ ಕೊಯ್ಯಾರು ಶಾಲೆಯ ಮುಖ್ಯೋಪಾಧ್ಯಾಯರು, ಗಣಿತ ಶಿಕ್ಷಕರಾದ ಯಾಕುಬ್ S. ಅವರಿಂದ ತರಗತಿ ನಡೆಯಿತು. ಶಾಲಾ ಪ್ರಾಂಶುಪಾಲರಾದ ಹಬೀಬ್ ರಹಮಾನ್ ಸ್ವಾಗತಿಸಿದರು. ಪ್ರೌಢಶಾಲಾ ಮೇಲ್ವಿಚಾರಕರಾದ ಖಲಂದರ್ ಶಫಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಮತ್ತು ಕಾಪು ತಾಲೂಕಿನ 5 ಪ್ರೌಢ ಶಾಲೆಗಳ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.