ಉಡುಪಿ: ಅಶ್ವಥ ಎಲೆಯಲ್ಲಿ ಮೂಡಿಬಂದ ರಾಜಕುಮಾರ್ ರೇಖಾಚಿತ್ರ!

ಉಡುಪಿ: ಇಂದು ನಟಸಾರ್ವಭೌಮ ಡಾ. ರಾಜಕುಮಾರ್ ಜನ್ಮದಿನ . ಈ ದಿನವನ್ನು ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ .ನಟಸಾರ್ವಭೌಮನ ಜನ್ಮದಿನದ ಅಂಗವಾಗಿ ಅಶ್ವಥ್ದ ಎಲೆಯಲ್ಲಿ ಚಿತ್ರವನ್ನು ರಚಿಸಲಾಗಿದೆ‌. 

97ನೇ ವರ್ಷದ ಜನುಮದಿನದ. ಅಂಗವಾಗಿ ಕಲಾವಿದ ಸಾಮಾಜಿಕ ಕಾರ್ಯಕರ್ತ ಸರಳೆಬೆಟ್ಟು ಗಣೇಶ್ ರಾಜ್ ಅವರು ಈ ಅಪರೂಪದ ಚಿತ್ರ ರಚಿಸಿದ್ದಾರೆ.ಕಲಾವಿದನ  ಕೈಚಳಕದಲ್ಲಿ ಒಣಗಿದ ಅಶ್ವಥ ಎಲೆಯಲ್ಲಿ ವರನಟ ರಾಜಕುಮಾರ್ ಅವರ ರೇಖಾ ಚಿತ್ರ ಮೂಡಿಬಂದಿದೆ. ಉಡುಪಿಯಲ್ಲಿ ರಾಜ್ ಅಭಿಮಾನಿ ಸಂಘದ ಕಾರ್ಯದರ್ಶಿಯಾಗಿ ಗಣೇಶ್ ರಾಜ್  ಕೆಲಸ ಮಾಡಿದ್ದರು.