ದುಬೈ: ಜುಲೈ 5ರಂದು 'ಮೂಳೂರು ಅಲ್ ಖಮರ್ ಟ್ರಸ್ಟ್'ನ ವಾರ್ಷಿಕ ಮಹಾಸಭೆ

ದುಬೈ: ಅಲ್ ಖಮರ್ ಟ್ರಸ್ಟ್ ಮೂಳೂರು ಇದರ ವಾರ್ಷಿಕ ಮಹಾಸಭೆ ಸಭೆ (Annual General Meeting – AGM) ಜುಲೈ 5ರ ರವಿವಾರದಂದು ಮಧ್ಯಾಹ್ನ 12:30ರಿಂದ ಸಂಜೆ 4:00 ಗಂಟೆಯವರೆಗೆ ನಡೆಯಲಿದೆ.

ಸಭೆಯು ದುಬೈ ವಿಮಾನ ನಿಲ್ದಾಣದ ಟರ್ಮಿನಲ್–2ರ ಎದುರಿನಲ್ಲಿರುವ ಗಝಲ್ ಪಾರ್ಟಿ ಹಾಲ್ ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಂ.ಇ.ಮೂಳೂರು, ಮೂಳೂರು ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಹಾಜಿ ಯೂಸುಫ್ ಉಮರ್, ಮೂಳೂರು ಜಮಾತ್ ವೆಲ್ಫೇರ್ ಫಾರಂ(MJWF), ತವಕ್ಕಲ್ ಓವರ್ಸಿಸ್ ದುಬೈ, ಅಲ್ ಇಸ್ಲಾಮೀಯ ದುಬೈಯ ಅಧ್ಯಕ್ಷರು ಭಾಗವಹಿಸಲಿದ್ದಾರೆ.