ನಿಮ್ಮ ಮಕ್ಕಳನ್ನು ಕ್ರೈಸ್ತ ಮಿಶನರಿ ಶಾಲೆಗೆ ಕಳುಹಿಸಿದರೆ ಮುಂದೆ ಅವರೇ ನಿಮ್ಮನ್ನು ವೃ#ದ್ಧಾಶ್ರಮಕ್ಕೆ ಕಳಿಸುತ್ತಾರೆ: ಸಾದ್ವಿ ಪ್ರಜ್ಞಾ ಸಿಂಗ್
Sunday, December 25, 2022
ಶಿವಮೊಗ್ಗ(Headlines Kannada): ನಿಮ್ಮ ಮಕ್ಕಳನ್ನು ಕ್ರೈಸ್ತ ಮಿಶನರಿ ಶಾಲೆಗೆ ಕಳುಹಿಸಬೇಡಿ, ಅಲ್ಲಿ ಕಲಿತ ಮಕ್ಕಳು ಮುಂದೆ ತಮ್ಮ ತಂದೆ-ತಾಯಿಯನ್ನು ವೃ#ದ್ಧಾಶ್ರಮಕ್ಕೆ ಕಳಿಸುತ್ತಾರೆ ಎಂದು ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ದಕ್ಷಿಣ ಪ್ರಾಂತ ತ್ರೈವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿ, ಹಿಂದೂ ಉ#ಗ್ರವಾದ ಎಂಬ ಪದಗಳನ್ನು ಬಳಸುವ ಸಮಾಜದ ಒಂದು ವರ್ಗದವರ ವಿರುದ್ಧ ಕಿಡಿಕಾರಿದರು. ಒಂದು ವೇಳೆ ಹಿಂದೂಗಳು ಉ#ಗ್ರವಾದಿಗಳೇ ಆಗಿದ್ದರೆ ನಮ್ಮ ದೇಶದಲ್ಲಿ ಬೇರೆ ಯಾವುದೇ ಧರ್ಮ ಇಂದು ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ ಎಂದರು.
ಇಲ್ಲಿನ ಕಾಂಗ್ರೆಸ್ ಅಧ್ಯಕ್ಷರಿಗೆ ಈಗ ಹಿಂದೂಗಳು ಕೇವಲ ನೆನಪಾಗಿದ್ದಾರೆ. ಇವರೆಲ್ಲರೂ ಚುನಾವಣೆ ಬಂದಾಗಷ್ಟೇ ಹಿಂದೂಗಳಾಗುವವರು. ಆದರೆ, ನಾವು ಹುಟ್ಟಿನಿಂದಲೇ ಹಿಂದೂಗಳು. ಇನ್ನಾದರೂ, ಹಿಂದೂಗಳ ಜೊತೆಗೆ ವಾಗ್ವಾದ, ಜಗಳ ನಡೆಸುವುದು, ಸಂ#ಘರ್ಷಕ್ಕಿಳಿಯುವುದನ್ನು ಇಲ್ಲಿನ ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಎಂದರು.