ಅ#ನ್ಯಸಮುದಾಯದ ಸ್ನೇಹಿತರೊಂದಿಗೆ ಮಗ ಮಾತನಾಡಿದ್ದಕ್ಕೆ ತಂದೆಯನ್ನು ಕೊ#ಲೆ ಮಾಡಿದ ನೆರೆಹೊರೆಯವರು !

ಅ#ನ್ಯಸಮುದಾಯದ ಸ್ನೇಹಿತರೊಂದಿಗೆ ಮಗ ಮಾತನಾಡಿದ್ದಕ್ಕೆ ತಂದೆಯನ್ನು ಕೊ#ಲೆ ಮಾಡಿದ ನೆರೆಹೊರೆಯವರು !ಬರೇಲಿ(Headlines Kannada): ಅ#ನ್ಯ ಸಮುದಾಯದ ಸ್ನೇಹಿತರ ಜತೆ ಸ್ನೇಹ ಬೆಳೆಸಿದ್ದ ಎಂಬ ಕಾರಣಕ್ಕೆ ಯುವಕನೊಬ್ಬನ ತಂದೆಯನ್ನು ನೆರೆಹೊರೆಯವರು ಸೇರಿ ಹ#ಲ್ಲೆ ನಡೆಸಿ ಹ#ತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಕಸೂತಿ(embroidery worker) ಕೆಲಸಗಾರನಾದ ಶಾರುಖ್ ಶೇಖ್ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಆತನ ಮೇಲೆ ನೆರೆಹೊರೆಯವರು ಹ#ಲ್ಲೆ ನಡೆಸಿದ್ದು, ಈ ವೇಳೆ  ಶಾರುಖ್‌ನ ತಂದೆ ಮೊಹಮ್ಮದ್ ಸರ್ತಾಜ್ ತನ್ನ ಮಗನನ್ನು ರಕ್ಷಿಸಲು ಪ್ರಯತ್ನಿಸಿದಾಗ, ಅವರ ಮೇಲೆ ಹ#ಲ್ಲೆ ಮಾಡಿದ್ದು, ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾ#ವನ್ನಪ್ಪಿದ್ದಾರೆ. 

ಶಾರುಖ್ ನೆರೆಹೊರೆಯವರಾದ ರಶೀದ್ ಖಾನ್, ಅಶು ಖಾನ್, ಫಯ್ಯಾಮ್ ಮತ್ತು ಫಾಜಿಲ್ ಈ ಕೃ#ತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 

ನನ್ನ ಕುಟುಂಬ ಅ#ನ್ಯ ಸಮುದಾಯದವರೊಂದಿಗೆ ಸೇರಲು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ನಮ್ಮ ನೆರೆಹೊರೆಯವರು ಇದನ್ನು ವಿರೋಧಿಸಿದ್ದು, ಅ#ನ್ಯ ಧರ್ಮದವರೊಂದಿಗೆ ಸಂಬಂಧ ಇಟ್ಟುಕೊಳ್ಳದಂತೆ ಬೆ#ದರಿಕೆಯನ್ನೂ ಹಾಕಿದ್ದರು ಎಂದು ಶಾರುಖ್‌ನ ಹಿರಿಯ ಸಹೋದರ ದಾವುದ್ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article