ನಾನು ಬಿಜೆಪಿಯಲ್ಲಿದ್ದು ಗೋಮಾಂಸ ತಿನ್ನುತ್ತೇನೆ, ಇದರಿಂದ ನನಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ: ಬಿಜೆಪಿ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ

ನಾನು ಬಿಜೆಪಿಯಲ್ಲಿದ್ದು ಗೋಮಾಂಸ ತಿನ್ನುತ್ತೇನೆ, ಇದರಿಂದ ನನಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ: ಬಿಜೆಪಿ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ

ಗುವಾಹಟಿ: ನಾನು ಬಿಜೆಪಿಯಲ್ಲಿದ್ದು ಗೋಮಾಂಸ ತಿನ್ನುತ್ತೇನೆ, ಇದರಿಂದ ನನಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ ಎಂದು ಮೇಘಾಲಯದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಹೇಳಿದ್ದಾರೆ.

ಫೆಬ್ರುವರಿ 27ರಂದು ಮೇಘಾಲಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಸಲು ನಾವು ಆಸ್ಪದ ಕೊಟ್ಟಿಲ್ಲ ಎಂದರು.

ಮೇಘಾಲಯದಲ್ಲಿ ಶೇಕಡ 90ರಷ್ಟು ಕ್ರೈಸ್ತರು ಇದ್ದು, ಈ ರಾಜ್ಯದಲ್ಲಿ ಜನರು ಗೋಮಾಂಸ ನಿಷೇಧ, CAA ಮತ್ತು ಇತರ ವಿಷಯಗಳಲ್ಲಿ ಬಿಜೆಪಿಯ ಕಠಿಣ ನಿಲುವುಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ನೀವು ನಂಬುತ್ತೀರಾ ಎಂಬ ಬಗ್ಗೆ ಅರ್ನೆಸ್ಟ್‌ ಮಾವ್ರಿ ಅವರಲ್ಲಿ ಪ್ರಶ್ನೆಯನ್ನು ಮುಂದಿಡಲಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ಅರ್ನೆಸ್ಟ್‌ ಮಾವ್ರಿ, BJP ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 9 ವರ್ಷಗಳಾಗಿದ್ದು, ಯಾವುದೇ ಚರ್ಚ್ ದಾ#ಳಿಗೆ ಒಳಗಾಗಿರುವುದನ್ನು ನಾವು ನೋಡಿಲ್ಲ. ಇಲ್ಲಿ ಗೋಮಾಂಸ ಸೇವನೆಗೂ ಯಾವುದೇ ನಿರ್ಬಂಧವಿಲ್ಲ. ನಾನೂ ಗೋಮಾಂಸ ತಿನ್ನುತ್ತೇನೆ ಹಾಗು ನಾನು ಬಿಜೆಪಿಯಲ್ಲೇ ಇದ್ದೇನೆ. ಇದರಿಂದ ಯಾವುದೇ ಸಮಸ್ಯೆಯಾಗಿದ್ದನ್ನು ನಾನು ಈವರೆಗೆ ಕಂಡಿಲ್ಲ. ಮೇಘಾಲಯದ ಜನತೆ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ ನೀವೇ ನೋಡಿ ಎಂದರು.

Ads on article

Advertise in articles 1

advertising articles 2

Advertise under the article