ರೌಡಿ ಶೀಟರ್ ಫೈಟರ್ ರವಿ ಎದುರು ಕೈಮುಗಿದು ನಿಂತ ಮೋದಿಯಿಂದ ಪ್ರಧಾನಿ ಹುದ್ದೆಗೆ ಕಳಂಕ: ವಾಗ್ದಾಳಿ ನಡೆಸಿದ ಕಾಂಗ್ರೆಸ್
ಬೆಂಗಳೂರು: ಇಂದು ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಬಗ್ಗೆ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಮೋದಿ ಅವರು ರೌಡಿ ಶೀಟರ್ ಫೈಟರ್ ರವಿಗೆ ಕೈ ಮುಗಿಯುವ ಫೋಟೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ದೇಶದ ಪ್ರಧಾನಿ ಹುದ್ದೆಗೆ ಮೋದಿ ಕಳಂಕ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ.
ಕಾಂಗ್ರೆಸ್ ಟ್ವೀಟ್'ನಲ್ಲಿ ಬಿಜೆಪಿ ವಿರುದ್ಧ ಹೇಳಿದ್ದು ಹೀಗೆ...
'ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ @narendramodi ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು.'
'Dear @narendramodi, ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ @CTRavi_BJP ಅವರನ್ನು ವಿಚಾರಿಸಿ! @BJP4Karnataka ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ? ##ModiMosa"
'ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನಲಿಲ್ಲ @BJP4Karnataka ಸರ್ಕಾರ. ಈಗ ಅದೇ ಮಂಡ್ಯದಲ್ಲಿ ಮೋದಿ ಕರೆಸಿ ಬರಿಗೈ ಬೀಸಿದರೆ ಜನ ಕೇಳುವರೇ? ರಾಜ್ಯ ನಾಯಕರ ನಂತರ ಮೋದಿಗೂ ಖಾಲಿ ಕುರ್ಚಿಗಳ ದರ್ಶನವಾಗಿದೆ, ಹಣ ಕೊಟ್ಟರೂ ಬಾರದ ಜನ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದಾರೆ. # #ModiMosa ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.