ಲೋಕಸಭೆ ಸ್ಪೀಕರ್ ಸ್ಥಾನಕ್ಕಾಗಿ ಎನ್ ಡಿಎ ಅಭ್ಯರ್ಥಿ ಓಂ ಬಿರ್ಲಾ- ಇಂಡಿಯಾ ಬಣದ ಅಭ್ಯರ್ಥಿ ಸುರೇಶ್ ನಡುವೆ ಪೈಪೋಟಿ: ನಾಳೆ ಮತದಾನ

ಲೋಕಸಭೆ ಸ್ಪೀಕರ್ ಸ್ಥಾನಕ್ಕಾಗಿ ಎನ್ ಡಿಎ ಅಭ್ಯರ್ಥಿ ಓಂ ಬಿರ್ಲಾ- ಇಂಡಿಯಾ ಬಣದ ಅಭ್ಯರ್ಥಿ ಸುರೇಶ್ ನಡುವೆ ಪೈಪೋಟಿ: ನಾಳೆ ಮತದಾನ

 

ನವದೆಹಲಿ: 18ನೇ ಲೋಕಸಭೆ ಸ್ಪೀಕರ್ ಸ್ಥಾನಕ್ಕಾಗಿ ಎನ್ ಡಿಎ ಅಭ್ಯರ್ಥಿ ಓಂ ಬಿರ್ಲಾ ಹಾಗೂ ವಿರೋಧ ಪಕ್ಷಗಳ ಇಂಡಿಯಾ ಬಣದ ಅಭ್ಯರ್ಥಿ ಕೋಡಿಕುನ್ನಿಲ್ ಸುರೇಶ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಉಪ ಸ್ಪೀಕರ್ ಸ್ಥಾನವನ್ನು ಬಿಟ್ಟುಕೊಡುವುದಾಗಿ ಎನ್ ಡಿಎ ಭರವಸೆ ನೀಡದ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಸಂಸತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪೀಕರ್ ಸ್ಥಾನಕ್ಕಾಗಿ ಪೈಪೋಟಿವೇರ್ಪಟ್ಟಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ನಡೆಯಲಿದೆ.

17ನೇ ಲೋಕಸಭೆಯ ಸ್ಪೀಕರ್ ಆಗಿದ್ದ ಬಿಜೆಪಿಯ ಓಂ ಬಿರ್ಲಾ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎನ್‌ಡಿಎಗೆ ಹೆಚ್ಚಿನ ಸಂಖ್ಯೆಯಿರುವ ಕಾರಣ ಅವರು ಆಯ್ಕೆಯಾಗಲಿದ್ದಾರೆ, ಆದರೆ ಇದಕ್ಕೆ ಪ್ರತಿಪಕ್ಷಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ. ಬಿರ್ಲಾ ಅವರ ಪ್ರತಿಸ್ಪರ್ಧಿಯಾಗಿರುವ ಕೋಡಿಕುನ್ನಿಲ್ ಸುರೇಶ್, ಕೇರಳದ ಮಾವೆಲಿಕರಾ ಕ್ಷೇತ್ರದಿಂದ ಎಂಟು ಬಾರಿ ಸಂಸದರಾಗಿದ್ದಾರೆ. ಪ್ರಸ್ತುತದ ಸದಸ್ಯರಲ್ಲಿ ಅತಿ ಹೆಚ್ಚು ಚುನಾವಣೆಗಳನ್ನು ಗೆದ್ದಿರುವ ಕಾರಣ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಹೆಸರಿಸಬೇಕೆಂದು ಪ್ರತಿಪಕ್ಷಗಳು ಭಾವಿಸಿದ್ದವು. ಆದರೆ, ಎನ್‌ಡಿಎ ಭರ್ತೃಹರಿ ಮಹತಾಬ್ ಪರವಾಗಿ ಮತ ಚಲಾಯಿಸಿದ್ದು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಮೊದಲ ಬಿಕ್ಕಟ್ಟಿಗೆ ಕಾರಣವಾಯಿತು.

Ads on article

Advertise in articles 1

advertising articles 2

Advertise under the article