ಅಪರಾಧಿ ಹಿನ್ನೆಲೆಯಿರುವ ಅದಾನಿಯನ್ನು ಮೋದಿಯವರು ರಕ್ಷಿಸುವುದ್ಯಾಕೆ‌?: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

ಅಪರಾಧಿ ಹಿನ್ನೆಲೆಯಿರುವ ಅದಾನಿಯನ್ನು ಮೋದಿಯವರು ರಕ್ಷಿಸುವುದ್ಯಾಕೆ‌?: ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ

 

ಬೆಂಗಳೂರು: ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ‌? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಹೊರಡಿಸಿದೆ. ಅದಾನಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸಲು ಅಧಿಕಾರಿಗಳಿಗೆ ರೂ2100 ಕೋಟಿಗೂ ಅಧಿಕ ಲಂಚದ ಅಮಿಷ ಒಡ್ಡಿದ್ದಾರೆ. ಆ ಲಂಚದ ಹಣವನ್ನು ವಿದೇಶಿ ಹೂಡಿಕೆದಾರರಿಂದ ಪಡೆದ ಆರೋಪದ ಮೇಲೆ ಅದಾನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದ ಬಳಿಕ ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ‌?

ಪ್ರತಿ ಭಾರಿ ಸಂಪತ್ತಿನ ಹಿಂದೆ ಒಂದೋ ಅಕ್ರಮವಿರುತ್ತದೆ, ಇಲ್ಲವೆ ಅಪರಾಧವಿರುತ್ತದೆ ಎಂಬುದು ಲೋಕರೂಢಿ ಮಾತು. ಮೋದಿ ಯವರ ಅತ್ಯಾಪ್ತ ಗೆಳೆಯ ಅದಾನಿ ಗಳಿಸಿರುವ ಸಂಪತ್ತಿನ ಹಿಂದೆ ಇಂತಹ ಹಲವು ಅಕ್ರಮಗಳು ಹಾಗೂ ಅಪರಾಧಗಳ ಸರಮಾಲೆಯೇ ಇದೆ. ಅದಾನಿಯವರು ತಮ್ಮ ಉದ್ಯಮ ವ್ಯವಹಾರ ವಿಸ್ತರಿಸಲು ಇಡಿ ವ್ಯವಸ್ಥೆಯನ್ನೇ ಭ್ರಷ್ಟ ಮಾಡುವ ಕಲೆ ಸಿದ್ದಿಸಿಕೊಂಡಿದ್ದಾರೆ. ಇಂತಹ ಭ್ರಷ್ಟ ಉದ್ಯಮಿಯನ್ನು ತಮ್ಮ ಆಪ್ತ ವಲಯದಲ್ಲಿ ಬಿಟ್ಟುಕೊಂಡಿರುವ ಮೋದಿಯವರ ಪ್ರಾಮಾಣಿಕತೆಯ ಬಗ್ಗೆಯೂ ಅನುಮಾನ ಮೂಡುವುದಿಲ್ಲವೆ.? ಎಂದು ಪ್ರಶ್ನಿಸಿದ್ದಾರೆ.

Ads on article

Advertise in articles 1

advertising articles 2

Advertise under the article