ಮಂಗಳೂರು: ರಾಜ್ಯ ಮೀನುಗಾರಿಕಾ ಇಲಾಖೆ ಮತ್ತು ಪಿಲಿಕುಳ ನಿಸರ್ಗಧಾಮದ ಜಂಟಿ ಆಶ್ರಯದಲ್ಲಿ ಜುಲೈ 27 ರ ರವಿವಾರ ಬೆಳಗ್ಗೆ 8.30 ಗಂಟೆಗೆ ಪಿಲಿಕುಳ ಲೇಕ್ ಗಾರ್ಡನ್'ನಲ್ಲಿ 'ಪಿಲಿಕುಳ ಮತ್ಸ್ಯ ಮೇಳ-2025' ಕಾರ್ಯಕ್ರಮ ನಡೆಯಲಿದೆ.
ಪಿಲಿಕುಳ ಮತ್ಯೋತ್ಸವದ ಅಂಗವಾಗಿ ಪಿಲಿಕುಳದ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು, ಹಿಡಿದ ಮೀನುಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲಾಗುವುದು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಸಿಹಿನೀರಿನ, ಸಮುದ್ರದ ಮೀನುಗಳ ಹಾಗೂ ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ತಾಜಾ ಸಮುದ್ರದ ಮೀನುಗಳ ವಿವಿಧ ಖಾದ್ಯಗಳನ್ನು ಸ್ಥಳದಲ್ಲಿ ತಯಾರಿಸಿ ಮಾರಾಟ ಮಾಡುವುದು ಮತ್ತು ಕರ್ನಾಟಕ ಮೀನುಗಾರಿಕಾ ಇಲಾಖಾ ವತಿಯಿಂದ ಮೀನು ಮರಿಗಳನ್ನು ಕೆರೆಯಲ್ಲಿ ಬಿಡುವುದು ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
