ವಿಮಾನ ದುರಂತದಲ್ಲಿ ಜನರ ಸಾವಾದಾಗ ನಾವೇನಾದರೂ ರಾಜೀನಾಮೆ ಕೇಳಿದ್ವಾ? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ವಿಮಾನ ಪತನದಲ್ಲಿ 262 ಜನರ ಸಾವಾಯ್ತಲ್ಲ ನಾವು ಏನಾದರೂ ರಾಜೀನಾಮೆ ಕೇಳಿದ್ದೇವಾ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಲ್ತುಳಿತ ಪ್ರಕರಣ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೊನ್ನೆ 262 ಜನ ಸತ್ರಲ್ಲ, ಅದಕ್ಕೆ ನಾವು ರಾಜೀನಾಮೆ ಕೇಳಿದ್ವಾ? ರೈಲ್ವೆ ದುರುಂತ ಆಯ್ತು, ಅದಕ್ಕೆ ರಾಜೀನಾಮೆ ಕೇಳಿದ್ವಾ? ಬ್ರಿಡ್ಜ್ ಕುಸಿತ ಆದಾಗ ಲೋಪ ಆಗಿಲ್ವಾ? ರಾಜೀನಾಮೆ ಕೇಳುವವರಿಗೆ ಏನು ನೈತಿಕತೆ ಇದೆ? ರಾಜಕೀಯ ಪ್ರೇರಿತವಾಗಿ ಮಾಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. 

ಇರಾನ್ ಇಸ್ರೇಲ್‌ನಲ್ಲಿ ಕನ್ನಡಿಗರು ಸಿಲುಕಿಕೊಂಡ ವಿಚಾರವಾಗಿ, ಈಗ ತಾನೇ ಅಲ್ಲಿರೋ ಕನ್ನಡಿಗರ ಜೊತೆಗೆ ಮಾತಾಡಿದೆ. ನಮ್ಮ ವಕ್ತಾರ ನಟರಾಜ ಗೌಡ ಜೊತೆಗೆ ಮಾತಾಡಿದ್ದೇನೆ. ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಅವರನ್ನ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.