'ಉಡುಪಿ - ಉಚ್ಚಿಲ ದಸರಾ'ದಲ್ಲಿ ಜನಮನ ರಂಜಿಸಿದ “ಗುರುಕಿರಣ್ ನೈಟ್ಸ್”; ಗುರುಕಿರಣ್ ಹಾಡಿಗೆ ಜನ ಪುಲ್ ಫಿದಾ!

'ಉಡುಪಿ - ಉಚ್ಚಿಲ ದಸರಾ'ದಲ್ಲಿ ಜನಮನ ರಂಜಿಸಿದ “ಗುರುಕಿರಣ್ ನೈಟ್ಸ್”; ಗುರುಕಿರಣ್ ಹಾಡಿಗೆ ಜನ ಪುಲ್ ಫಿದಾ!

Photo: Sachin Uchila

ಉಚ್ಚಿಲ: 'ಉಡುಪಿ - ಉಚ್ಚಿಲ ದಸರಾ' ಎಂದೇ ದೇಶ-ವಿದೇಶದಲ್ಲಿ ಪ್ರಸಿದ್ಧವಾಗುತ್ತಿರುವ ಇಲ್ಲಿನ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೋಮವಾರ ನಡೆದ ದಸರಾ ಮಹೋತ್ಸವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕ, ನಟ, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದಿಂದ “ಗುರುಕಿರಣ್ ನೈಟ್ಸ್” ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.  








ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಕಿರಣ್ ಮತ್ತು ತಂಡದವರ “ಗುರುಕಿರಣ್ ನೈಟ್ಸ್” ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಗುರುಕಿರಣ್ ಜೊತೆ ಗಾಯಕಿ ಅನುರಾಧ ಭಟ್, ಚೈತ್ರ, ಸಂತೋಷ್ ವೆಂಕಿ ಅವರ ಕನ್ನಡ, ಹಿಂದಿ ಹಳೆಯ, ಹೊಸ ಹಾಡುಗಳನ್ನು ಹಾಡಿ ನೆರೆದವನ್ನು ಮೋಡಿ ಮಾಡಿದರು. 





ಗುರುಕಿರಣ್ ಹಾಗು ತಂಡದ ಗಾಯಕರ ಸ್ವರ ಮಾಧುರ್ಯಕ್ಕೆ ಉಚ್ಚಿಲ ಜನತೆ ಪುಲ್ ಫಿದಾ ಆದರು. ಅನುಪಮ್ ಭಟ್ ಅವರ ನಿರೂಪಣೆಯ ಶೈಲಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟಿತು.

ಈ ಸಂದರ್ಭದಲ್ಲಿ ಗುರುಕಿರಣ್ ಹಾಗು ಅವರ ಧರ್ಮ ಪತ್ನಿ ಪಲ್ಲವಿ ಗುರುಕಿರಣ್, ಗಾಯಕಿ ಅನುರಾಧ ಭಟ್, ಚೈತ್ರ, ಸಂತೋಷ್ ವೆಂಕಿ, ಸಂಗೀತ ಬ್ಯಾಂಡ್ ಪರವಾಗಿ ರಾಜ್ ಗೋಪಾಲ್ ಅವರನ್ನು ಉಚ್ಚಿಲ ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ.ಶಂಕರ್ ಹಾಗು ಅವರ ಧರ್ಮ ಪತ್ನಿ ಶಾಲಿನಿ ಜಿ.ಶಂಕರ್ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಶಾಮಿಲಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್‌, ಉಷಾ ರಾಣಿ ಈ ಸಂದರ್ಭದಲ್ಲಿ ಹಾಜರಿದ್ದರು. ಸನ್ಮಾನ ಕಾರ್ಯಕ್ರಮವನ್ನು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಅವರು ನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article