ಡಾ.ಗಂಗಣ್ಣ ನಾಗನಟಿಗಿಗೆ ಗೌರವ ಡಾಕ್ಟರೇಟ್: ಮಲ್ಲು ಹಲಗಿಯಿಂದ ಅಭಿನಂದನೆ

ರಾಜಸ್ಥಾನ ಸನ್ ರೈಸ್ ವಿಶ್ವವಿದ್ಯಾಲಯದದಿಂದ ರಾಷ್ಟ್ರೀಯ ಪಕ್ಷಗಳ ಮೈತ್ರಿ ಎಂಬ ವಿಷಯದ ಮಂಡನೆ ಕುರಿತು ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ನಾಗನಟಗಿ ಗ್ರಾಮದ ಹಿರಿಯ ಜೀವಿ, ಸರಳ ಸಜ್ಜನಿಕೆಯ ವ್ಯಕ್ತಿತ್ವ, ಸಾಮಾಜಿಕ ಕಳಕಳಿಯ ನಾಯಕ, ಸಮ ಸಮಾಜ ನಿರ್ಮಾಣದ ಕನಸುಗಾರ ಡಾ.ಗಂಗಣ್ಣ ಎಸ್ ಹೊಸ್ಮನಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.  ಈ ಸಂಬಂಧ ಶಹಾಪುರ ನಗರದ ನಂದಿನಿ ಗ್ರಾಂಡ್ ಹೋಟೆಲ್ ನಲ್ಲಿ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಎಸ್ಸಿ ವಿಭಾಗ) ಸಂ. ಕಾರ್ಯದರ್ಶಿ ಮಲ್ಲು ಹಲಗಿ ಕುರಕುಂದ ಅವರು ಹರ್ಷ ವ್ಯಕ್ತ ಪಡಿಸಿ ಆತ್ಮೀಯವಾಗಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಂಗಣ್ಣ ದಿಗ್ಗಿ, ಮಲ್ಲಣ್ಣ ಗೌಡ ಪಾಟೀಲ್ ಉಮರದೊಡ್ಡಿ ಹಾಜರಿದ್ದರು.