ಸಿತಾರ್ ಮಜೀದ್ ಹಾಜಿಗೆ ಅಥಾವುಲ್ಲಾಹ್ ತಂಙಳ್ ರಿಂದ ಅಭಿನಂದನೆ



ಮಂಗಳೂರು: 'ಭಾರತ ರತ್ನ ಡಾ‌. ಎ ಪಿ ಜೆ ಅಬ್ದುಲ್ ಕಲಾಂ  ಸೋಶಿಯಲ್ ಡೆವಪ್ಮೆಂಟ್ ಫೌಂಡೇಶನ್( ರಿ)' ಇದರ  ನೂತನ ಅಧ್ಯಕ್ಷರಾದ ಸಿತಾರ್ ಮಜೀದ್ ಹಾಜಿಯವರಿಗೆ ಆಧ್ಯಾತ್ಮಿಕ ನಾಯಕ ಸಯ್ಯಿದ್ ಅಥಾವುಲ್ಲಾಹ್ ತಂಙಳ್ ಅವರು ಶಾಲು, ಫಲಪುಷ್ಪ ನೀಡಿ ಸನ್ಮಾನಿಸಿದರು. 

ಇತ್ತೀಚೆಗೆ ಮಂಗಳೂರು ಸಾಯಿ ಪ್ಯಾಲೇಸ್ ನಲ್ಲಿ ನಡೆದ ಸಭೆಯಲ್ಲಿ ಸಿತಾರ್ ಮಜೀದ್ ಹಾಜಿಯವರನ್ನು ಅಧ್ಯಕ್ಷರನ್ನಾಗಿ ಆರಿಸಲಾಗಿತ್ತು.  ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ  ಪ್ರಧಾನ ಕಾರ್ಯದರ್ಶಿಯಾಗಿಯೂ, ಅಬೂಬಕರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಗಣೇಶ್ ಪ್ರಸಾದ್, ಪತ್ರಕರ್ತ ಮೊಹಮ್ಮದ್ ಇಕ್ಬಾಲ್ ಉಚ್ಚಿಲ ಮತ್ತು ಶಾಹಿನ್ ಸದಸ್ಯರಾಗಿದ್ದಾರೆ.

ಸಂಸ್ಥೆಯನ್ನು ಸ್ವಾರ್ಥರಹಿತವಾಗಿ ಮುನ್ನಡೆಸುವ ಸೌಭಾಗ್ಯ ಮಜೀದ್ ಹಾಜಿಯವರಿಗೆ  ದೊರೆಯಲಿ ಎಂದು ತಂಙಳ್ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು‌. ಒಂದು ಸಂಸ್ಥೆಯನ್ನು ಹೇಗೆ ಮುನ್ನಡೆಸಬೇಕು, ಸಂಸ್ಥೆಯ ಸಾಮಾಜಿಕ ಪ್ರತಿಬದ್ಧತೆ ಹೇಗಿರಬೇಕು, ಪದಾಧಿಕಾರಿಗಳ ಕರ್ತವ್ಯಗಳೇನು ಎಂಬ ವಿಷಯಲ್ಲಿ ತಂಙಳ್ ಅವರು ಮನೋಜ್ಞ ಮಾರ್ಗದರ್ಶನ ನೀಡಿದರು‌. ಈ ಸಂದರ್ಭದಲ್ಲಿ  ಸಾಹಿತಿ  ಡಿಐ ಅಬೂಬಕರ್ ಕೈರಂಗಳ, ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರೆ, ಹಮೀದ್ ಅಮ್ಮಿ ಕೈಕಂಬ, ಉದ್ಯಮಿ ಇಂತಿಯಾಜ್ ಕಿನ್ಯ ಉಪಸ್ಥಿತರಿದ್ದರು.