ಹಗಲಿರುಳು ಶ್ರಮಿಸುತ್ತಿರುವ ಸ್ವಯಂಸೇವಕರು, ಮುಖಂಡರಿಂದಲೇ ‘ಉಡುಪಿ-ಉಚ್ಚಿಲ ದಸರಾ' ಖ್ಯಾತಿಗೊಂಡಿದೆ: ಸಮಾರೋಪ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದ ಡಾ.ಜಿ.ಶಂಕರ್

ಹಗಲಿರುಳು ಶ್ರಮಿಸುತ್ತಿರುವ ಸ್ವಯಂಸೇವಕರು, ಮುಖಂಡರಿಂದಲೇ ‘ಉಡುಪಿ-ಉಚ್ಚಿಲ ದಸರಾ' ಖ್ಯಾತಿಗೊಂಡಿದೆ: ಸಮಾರೋಪ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದ ಡಾ.ಜಿ.ಶಂಕರ್

ಉಚ್ಚಿಲ: ‘ಉಡುಪಿ-ಉಚ್ಚಿಲ ದಸರಾ' ಈವತ್ತು ಅತ್ಯಾಕರ್ಷಕವಾಗಿ, ಅಚ್ಚುಕಟ್ಟಾಗಿ, ಸುಸೂತ್ರವಾಗಿ ನಡೆದು ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಲು ಕಾರಣ ದಸರಾದ ಹಿಂದೆ ಹಗಲಿರುಳು ಎನ್ನದೇ ಸೇವೆ ಸಲ್ಲಿಸುತ್ತಿರುವ ಸಮುದಾಯದ ಸ್ವಯಂಸೇವಕರು, ಮುಖಂಡರು. ಇವರ ಅವಿರತ ಪರಿಶ್ರಮದಿಂದ ದಸರಾ ಸೊಬಗು ಎಲ್ಲೆಡೆ ಹರಡುತ್ತಿದೆ ಎಂದು ದಸರಾ ರೂವಾರಿ, ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ಕ್ರತಜ್ನತೆ ಸಲ್ಲಿಸಿದ್ದಾರೆ.






ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ರ ಸಮಾರೋಪ ಸಮಾರಂಭದಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ದಸರಾವನ್ನು ಅಚ್ಚುಕಟ್ಟಾಗಿ, ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಸಹಕರಿಸಿದ ಮೊಗವೀರ ಸಮುದಾಯದ ಸ್ವಯಂಸೇವಕರಿಗೆ, ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ಉಡುಪಿ ಉಚ್ಚಿಲ ದಸರಾ ಯಶಸ್ಸಿನ ಪಾಲಿನಲ್ಲಿ ಸರ್ವರ ಶ್ರಮವಿದೆ. ದೇಶ ವಿದೇಶದಲ್ಲೂ ಉಡುಪಿ – ಉಚ್ಚಿಲ ದಸರಾದ‌ ಕಂಪು ಹರಡಿದೆ. ದಸರಾಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.






ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು, ಉದಯ ಕುಮಾರ್ ಹಟ್ಟಿಯಂಗಡಿ, ಯುವರಾಜ್ ಮಸ್ಕತ್, ವಿನಯ ಕರ್ಕೇರ,   ಶಿವಕುಮಾರ್ ಮೆಂಡನ್, ಶೇಖರ್ ಸಾಲ್ಯಾನ್, ಸತೀಶ್ ಕುಂದರ್, ಶಿಲ್ಪಾ ಕುಂದರ್, ಉಷಾ ರಾಣಿ, ಸಂಧ್ಯಾದೀಪ ಸುನಿಲ್, ಸುಗುಣ, ಪದ್ಮಾಕರ್, ಕೇಶವ ಕೋಟ್ಯಾನ್, ಯುವರಾಜ್ ಕಿದಿಯೂರು, ಗಿರೀಶ್ ಕುಮಾರ್, ಶಿಲ್ಪಾ ಗಂಗಾಧರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಸ್ವಾಗತಿಸಿದರು. ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ನಿರೂಪಿಸಿದರು. ದ.ಕ.ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ವಂದಿಸಿದರು.

Ads on article

Advertise in articles 1

advertising articles 2

Advertise under the article