ಗಂಡನ ಜೊತೆ ಮಲಗಲು ನಿರಾಕರಿಸಿದ ಹೆಂಡತಿ; ಕೊಡಲಿಯಿಂದ ಕೊಚ್ಚಿ ಕೊಂದು ಪೊಲೀಸರಿಗೆ ಶರಣಾದ ಗಂಡ

ಗಂಡನ ಜೊತೆ ಮಲಗಲು ನಿರಾಕರಿಸಿದ ಹೆಂಡತಿ; ಕೊಡಲಿಯಿಂದ ಕೊಚ್ಚಿ ಕೊಂದು ಪೊಲೀಸರಿಗೆ ಶರಣಾದ ಗಂಡ

ಯಾದಗಿರಿ: ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಪತ್ನಿಯನ್ನು ಭೀಕರವಾಗಿ ಪತಿಯೇ ಕೊಲೆಗೈದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಡೊಣ್ಣೆಗೇರಾದಲ್ಲಿ ನಡೆದಿದೆ.

ಮರೆಮ್ಮ (25) ಹತ್ಯೆಗೀಡಾದ ಮಹಿಳೆ. ರಾತ್ರಿ ಮಲಗಿದ್ದಾಗ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಪತಿ ಸಂಗಪ್ಪ ಕೊಲೆ ಮಾಡಿದ್ದಾನೆ. ಗಂಡ ಸರಿಯಾಗಿ ನೋಡಿಕೊಳ್ಳದ ಕಾರಣ ಒಂದು ವರ್ಷದ ಹಿಂದೆಯೇ ಮೃತ ಮಹಿಳೆ ಮರೆಮ್ಮ ಗಂಡನ ಮನೆ ತೊರೆದು ತವರು ಮನೆಗೆ ಬಂದಿದ್ದಳು. ಆದರೂ ಆಗಾಗ ಹೆಂಡತಿ ಹಾಗೂ ಗಂಡನ ನಡುವೆ ಜಗಳವಾಗುತ್ತಿತ್ತು. ಘಟನೆ ನಡೆದ ಎರಡು ದಿನಗಳ ಹಿಂದೆ ಪತಿ ಸಂಗಪ್ಪ ಕಕ್ಕೇರಾದಿಂದ ಹೆಂಡತಿ ಮನೆಗೆ ಬಂದಿದ್ದ. ಈ ವೇಳೆ ರಾತ್ರಿ ಮಲಗಿದ್ದಾಗ ಹೆಂಡತಿ ಕುತ್ತಿಗೆ ಭಾಗಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

ಕೊಲೆ ನಂತರ ಕೊಡಲಿ ಸಮೇತ ಸುರಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಂಡನ ಜೊತೆ ಮಲಗಲು ಹೆಂಡತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಸಂಬಂಧ ಕೇಸ್ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article