ಕಾರ್ಕಳ ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್ ವತಿಯಿಂದ 50 ಸಾವಿರ ದೇಣಿಗೆ

ಕಾರ್ಕಳ ಸರಕಾರಿ ಆಸ್ಪತ್ರೆಗೆ ಜಮೀಯತುಲ್ ಫಲಾಹ್ ವತಿಯಿಂದ 50 ಸಾವಿರ ದೇಣಿಗೆ

ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆಯ ಮಕ್ಕಳ ವಾರ್ಡಿನ ಪೈಂಟಿಂಗ್, ಸುಂದರೀಕರಣ ಹಾಗೂ ಚಿತ್ರಗಳ ಬಿಡಿಸುವಿಕೆಗಾಗಿ 50 ಸಾವಿರ ರೂಪಾಯಿ ದೇಣಿಗೆಯನ್ನು ಸಂಘದ ಸದಸ್ಯ ಅಮೀರ್ ಹುಸೇನ್ ಅವರ ಸಹಕಾರದೊಂದಿಗೆ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ನೀಡಲಾಯಿತು.


ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ತಾಲೂಕು ಅರೋಗ್ಯಧಿಕಾರಿ ಡಾ ಸಂದೀಪ್ ಕುಡ್ವರವರಿಗೆ 50 ಸಾವಿರ ರೂಪಾಯಿ ಚೆಕ್ಕನ್ನು ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯ ಕಿವಿ ಮತ್ತು ಗಂಟಲು ತಜ್ಞ ಡಾ ಅನಂತ್ ಕಾಮತ್, ಮಕ್ಕಳ ತಜ್ಞೆ ಸೌಜನ್ಯ, ಅರಿವಿಳಿಕೆ ತಜ್ಞ ಡಾ ತುಷಾರ್, ಎಲುಬು ಮತ್ತು ಕೀಲು ತಜ್ಞ ಡಾ ನಿತಿನ್ ಶೆಟ್ಟಿ, ಫಿಜಿಶಿಯನ್ ಡಾ ಚಂದ್ರಕಾಂತ್, ಪ್ರಸುತಿ ತಜ್ಞೆ ಡಾ ಜಾಸ್ಮಿನ್, ಜಮೀಯತುಲ್ ಫಲಹ್ ದ. ಕ. ಉಡುಪಿ ಜಿಲ್ಲಾ ಅಧ್ಯಕ್ಷ ಅಷ್ಪಾಕ್ ಅಹ್ಮದ್, ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ಕೋಶಾಧಿಕಾರಿ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಅಮೀರ್ ಹುಸೇನ್ ಇನ್ನಿತರ ಸದಸ್ಯರು ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article