ಉಡುಪಿ: ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಋಕ್ ಸಂಹಿತಾ ಯಾಗ ಹಾಗೂ ಶ್ರೀಮದ್ಭಾಗವತ ಸಪ್ತಾಹ ಮಹೋತ್ಸವ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ ನೆರವೇರಿತು.
ಶ್ರೀಕೃಷ್ಣ ಮಠದ ಎದುರಿನಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯುದ್ಧಕ್ಕೂ ಕುಣಿತ ಭಜನೆ, ಹಾಸ್ಯ ಗೊಂಬೆಗಳು, ಕೀಲು ಕುದುರೆ ಹಾಗೂ ವಿವಿಧ ಜಾನಪದ ಕಲಾಪ್ರಕಾರಗಳು ಗಮನ ಸೆಳೆದವು.
ದೇವಸ್ಥಾನದ ಆಡಳಿತ ಮೊಕ್ತಸರ ಮಾಜಿ 'ಶಾಸಕ ಕೆ. ರಘುಪತಿ ಭಟ್, ಮೊಕೇಸರರಾದ ಶೇಖರ ಜತ್ತನ್, ಲಕ್ಷ್ಮಣ ಶೇರಿಗಾರ್, ಲಕ್ಷ್ಮೀನಾರಾಯಣ ಬಿ. ಆಚಾರ್ಯ, ಶೈಲಶ್ರೀ
ಡಿ. ಶೆಟ್ಟಿ ಸುಂದರ ಅಮೀನ್, ವಿಶ್ವನಾಥ ಆಚಾರ್ಯ, ಪರ್ಯಾಯ ಅರ್ಚಕರಾದ ಗೋವಿಂದ ಐತಾಳ, ದಿವಾಕರ ಎಂ. ದಿವಾಕರ ಶೆಟ್ಟಿ ಕಾರ್ಯಾಧ್ಯಕ್ಷ ರಂಜನ್, ಪ್ರಧಾನ ಕಾರ್ಯದರ್ಶಿ ರಮೇಶ್ ಬಾರಿತ್ತಾಯ, ಕೋಶಾಧಿಕಾರಿ ಕೆ. ವಿಟ್ಠಲ ಶೆಟ್ಟಿ ಜತೆಕಾರ್ಯದರ್ಶಿ ದಿನೇಶ್ ಅಮೀನ್, ಪುತ್ತಿಗೆ ಮಠದ ದಿವಾನರಾದ ನಾಗರಾಜ, ಆಚಾರ್ಯ, ಐತಾಳ, ರಮೇಶ್ ಐತಾಳ, ಪ್ರಸನ್ನ ಆಚಾರ್ಯ, ತಂತ್ರಿಗಳಾದ ವಾಸುದೇವ, ತಂತ್ರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಗಿರಿಧರ ಆಚಾರ್ಯ, ಪ್ರಮುಖರಾದ ಸುವರ್ಧನ ನಾಯಕ್, ರಮೇಶ್ ಕಾಂಚನ್, ಯಾದವ ಆಚಾರ್ಯ, ನಾರಾಯಣ ಪೂಜಾರಿ ಮೊದಲಾದವರಿದ್ದರು.
