ಮಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿತ ದೇಶದಲ್ಲಿ ಭುಗಿಲೆದ್ಧ ಆಕ್ರೋಶಕ್ಕೆ ಕೇಂದ್ರ ಸರಕಾರದ ಮೊದಲ ವಿಕೆಟ್ ಪತನಗೊಂಡಿದ್ದು ರಾಜೀನಾಮೆ ನೀಡಿರುವ ಧರ್ಮೆಂದ್ರ ಪ್ರಧಾನ್ ಮಾತ್ರವಲ್ಲಾ, ಇದರ ಹಿಂದಿನ ಕಾಣದ ಕೈಗಳನ್ನು ಕಾನೂನಿನ ಕುಣಿಕೆಗೆ ತರಬೇಕು, ಈವೊಂದು ಹಿನ್ನೆಲೆಯಲ್ಲಿ ತಮ್ಮ ಅಮೂಲ್ಯ ಜೀವವನ್ನು ತೆತ್ತ ವಿದ್ಯಾರ್ಥಿಗಳ ಪರಿವಾರಕ್ಕೆ ಗರಿಷ್ಠ ಪ್ರಮಾಣದ ಪರಿಹಾರವನ್ನು ಘೋಷಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಯುವ ಮುಖಂಡರೂ, ಯುವ ಜನಪರ ಹೋರಾಟಗಾರ, ಕಡಲ ತೀರ ವಲಯ ನಿರ್ವಹಣ ಸಮಿತಿ ಸದಸ್ಯ ಎ ಕೆ ಅನ್ಸಾಫ್ ಒತ್ತಾಯಿಸಿದ್ದಾರೆ..
ಹೋರಾಟ ನಡೆಸುವ ಮೂಲಕ ಪ್ರಧಾನ್ ರಾಜಿನಾಮೆ ಆಯಿತು. ನಮ್ಮ ಮುಂದಿನ ಗುರಿ ಪ್ರಧಾನಿಯ ರಾಜಿನಾಮೆ , ಯುವ ಶಕ್ತಿ ಅಣು ಶಕ್ತಿ ಇದ್ದಂತೆ ಎಂಬುವುದನ್ನು ಭಾಜಪ ಸರಕಾರ ಮರೆಯಬಾರದು ಎಂದಿರುವ ಎ ಕೆ ಅನ್ಸಾಫ್, ಸಚಿವರ ತಪ್ಪಿಲ್ಲಾಂದ್ರೆ ಪ್ರಧಾನ್ ಯಾಕೆ ರಾಜಿನಾಮೆ ನೀಡಬೇಕಿತ್ತು ? ಈ ಪ್ರಶ್ನ್ ಪತ್ರಿಕೆ ಸೋರಿಕೆಯ ಸೂಕ್ತ ತನಿಖೆ ಆಗಬೇಕು, ಪ್ರಧಾನ್ ಅವರನ್ನು ಬಲಿ ಪಡೆಯಲಾಗಿದ್ದು, ಇದರ ಹಿಂದೆ ಪ್ರಧಾನಿಯೇ ಇದ್ದಾರೆ ಎಂಬ ಸಂಶಯ ಪ್ರತಿಯೊಬ್ಬ ಭಾರತೀಯರಿಗೆ ಕಾಡಿದರೂ ಆಶ್ಚರ್ಯ ಇಲ್ಲಾ ಎಂದು ಎ ಕೆ ಅನ್ಸಾಫ್ ಹೇಳಿದ್ದಾರೆ.
ಭಾರತದ ಆಧುನಿಕ ಗಾಂಧಿ ರಾಹುಲ್ ಗಾಂಧಿ ಎಂದ ಎ ಕೆ ಅನ್ಸಾಫ್, ಇಂದಿರಮ್ಮನ ಮೊಮ್ಮಗನ ಮೇಲೆ ಭವಿಷ್ಯದ ಭಾರತ ನಿಂತಿದೆ ಎಂದು ತನ್ನ ಪಕ್ಷದ ಹೈಕಮಾಂಡ್ ನಾಯಕನ ಅಂದಿನಿಂದ ಇಂದಿನವರೆಗಿನ ಗಾಂಧಿ ಪರಿವಾರದ ಹೋರಾಟದ ಹಾದಿಯನ್ನು ಮೆಲುಕು ಹಾಕಿದ್ದು, ರಾಹುಲ್ ಗೆ ಶಕ್ತಿಯಾಗಿ ನಿಂತ ಭಾರತದ ಯುವ ಶಕ್ತಿಯನ್ನು ಅಣುಶಕ್ತಿ ಎಂದಿದ್ದಾರೆ.
