Gen Z ಹೋರಾಟಕ್ಕೆ ಬೆಚ್ಚಿಬಿದ್ದ ಕೇಂದ್ರ ಸರಕಾರ; ಸಖತ್ ವೈರಲ್ ಆದ ಬಾಲಿವುಡ್ ನಟ ಸೋನು ಸೂದ್ ಪೋಸ್ಟ್!

ನವದೆಹಲಿ: ದೇಶದಲ್ಲಿ 'ಚಳವಳಿಗಳ ಕಾಲ ಮುಗಿಯಿತು' ಅಂದುಕೊಳ್ಳುತ್ತಿದ್ದಾಗಲೇ Gen Z ಹೋರಾಟಕ್ಕೆ ಕೇಂದ್ರ ಸರ್ಕಾರ ಬೆಚ್ಚಿ ಬಿದ್ದಿದೆ.

ನೀಟ್ ಪರೀಕ್ಷೆಯಲ್ಲಿ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಸಕ್ಸಸ್ ಆಗಿದೆ.

ಈ Gen Z ಗಳ ಪ್ರಭಾವ ಕುರಿತು ಬಾಲಿವುಡ್ ನಟ ಸೋನು ಸೂದ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ವೊಂದು ಸಖತ್ ವೈರಲ್ ಆಗಿದೆ.

https://twitter.com/SonuSood/status/2080991798504419622

('Gen Z...how) ಜೆನ್ -ಝೀ ನಾನು ನೀನಾಗುವುದು ಹೇಗೆ?" ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಹಾಸ್ಯಮಯ ಕಾಮೆಂಟ್, ಮೀಮ್‌ಗಳೊಂದಿಗೆ ಪ್ರತಿಕ್ರಿಯಿಸುವುದರೊಂದಿಗೆ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್, ಕಾಮೆಂಟ್ ಬಂದಿವೆ.

ಕೆಲವರು ತಮಾಷೆಯಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಗಂಟೆಗಟ್ಟಲೆ ಸ್ಕ್ರೋಲ್ ಮಾಡಬೇಕೆಂದು ಸೂಚಿಸಿದರೆ, ಮತ್ತೆ ಕೆಲವರು ನಿಮ್ಮ ತಲೆಯನ್ನು ಗೋಡೆಯ ಮೇಲೆ 500 ಬಾರಿ ಹೊಡೆಯಿರಿ" ಎಂದು ಸಲಹೆ ನೀಡಿದ್ದಾರೆ.