ಉಡುಪಿ: ಉದ್ಯಮಿ ಕಿಸ್ಮತ್ ರಫೀಕ್ ಸಾಹೇಬ್ ನಿಧನ

ಉಡುಪಿ, ಆ.೯: ಉಡುಪಿಯ ಉದ್ಯಮಿ ಕಿಸ್ಮತ್ ರಫೀಕ್ ಸಾಹೇಬ್ (೬೭) ರವಿವಾರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಕುಂಜಿಬೆಟ್ಟು ನಿವಾಸಿಯಾಗಿರುವ ಇವರು, ಕಿಸ್ಮತ್ ಚಾರ್ಕೋಲ್ ಮತ್ತು ಪ್ರಿಯಾ ಬೀಡಿ ಮಾಲಕರಾಗಿದ್ದರು. ಹಲವು ವರ್ಷಗಳಿಂದ ಉದ್ಯಮ ನಡೆಸುತ್ತಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.