ಉಚ್ಚಿಲ; ತವಕ್ಕಲ್ ನ 'ಅಲ್ಫಿಯಾ ಅಕಾಡೆಮಿ'ಗೆ ಚಾಲನೆ; ಇಸ್ಲಾಮಿಕ್ ಶಿಕ್ಷಣಕ್ಕೆ ನೂತನ ಆನ್‌ಲೈನ್ ವೇದಿಕೆ


ಉಚ್ಚಿಲ: ವಿಶ್ವದಾದ್ಯಂತದ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಹಾಗೂ ಅತ್ಯಂತ ಸೂಕ್ತವಾಗಿ  ಇಸ್ಲಾಮಿಕ್ ಶಿಕ್ಷಣವನ್ನು ತಲುಪಿಸುವ ಉದ್ದೇಶದಿಂದ ತವಕ್ಕಲ್ ಸಂಸ್ಥೆಯ ಆಶ್ರಯದಲ್ಲಿ ರೂಪುಗೊಂಡಿರುವ 'ಅಲ್ಫಿಯಾ ಅಕಾಡೆಮಿ'ಗೆ ರವಿವಾರ ಅಧಿಕೃತ ಚಾಲನೆ ನೀಡಲಾಯಿತು.

ಈ ಹಿನ್ನೆಲೆಯಲ್ಲಿ ಉಚ್ಚಿಲದ ತವಕ್ಕಲ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಕಟ್ಟಡದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಝೂಮ್(Zoom) ಮೂಲಕ ಆನ್‌ಲೈನ್ ಉದ್ಘಾಟನೆಯನ್ನು ನೆರವೇರಿಸಲಾಯಿತು. 

'ಅಲ್ಫಿಯಾ ಅಕಾಡೆಮಿ'ಯು 10 ಪ್ರಮುಖ ಇಸ್ಲಾಮಿಕ್ ವಿಷಯಗಳನ್ನು ಒಳಗೊಂಡಿರುವ ವ್ಯವಸ್ಥಿತ ಪಠ್ಯಕ್ರಮದ ಮೂಲಕ '1,000 Lights of Islamic Knowledge' ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಹಂತ ಹಂತವಾಗಿ ಪಾಠಗಳನ್ನು ಕಲಿಯುವ ವ್ಯವಸ್ಥೆ, ಪ್ರತಿ ಹಂತದಲ್ಲಿ ಕ್ವಿಝ್ ಮೂಲಕ ಜ್ಞಾನ ಮೌಲ್ಯಮಾಪನ ಹಾಗೂ ಕೋರ್ಸ್ ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಪ್ರಮಾಣಪತ್ರವನ್ನು ನೀಡುವ ವ್ಯವಸ್ಥೆಯನ್ನು ಅಕಾಡೆಮಿಯು ಹೊಂದಿದೆ.

ಯಾವುದೇ ವಯೋಮಾನದ ಹಾಗೂ ಯಾವುದೇ ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದ್ದು, ಪ್ರತಿ ವಿದ್ಯಾರ್ಥಿಗೆ ₹999 ಕೋರ್ಸ್ ಶುಲ್ಕ ನಿಗದಿಪಡಿಸಲಾಗಿದೆ.

ಉದ್ಘಾಟನಾ ಸಮಾರಂಭ; 

ಬಿಲಾಲ್ ಅಬ್ದುಲ್ ರಹ್ಮಾನ್ ಕುರ್‌ಆನ್ ಪಾರಾಯಣ(ಕಿರಾತ್)  ಮಾಡಿದರು. ಬಿಲಾಲ್ ಮೊಹಮ್ಮದ್ ಸುಲೈಮಾನ್ ಸ್ವಾಗತಿಸಿದರು. ಶಮೀರ್ ಅಹ್ಮದ್ ಅವರು ತವಕ್ಕಲ್ ಹಾಗೂ ಅಲ್ಫಿಯಾ ಅಕಾಡೆಮಿಯ ಕುರಿತು ಪರಿಚಯ ನೀಡಿದರು. ಜಾವೇದ್ ಅಹ್ಮದ್ ಅಕಾಡೆಮಿಯ ಪೋರ್ಟಲ್ ಕಾರ್ಯವಿಧಾನದ ಕುರಿತು ವಿವರಿಸಿದರು. ರೈಫ್ ಅಬ್ದುಲ್ ರಝಾಕ್ ವಿಡಿಯೊ ಬಗ್ಗೆ ವಿವರಣೆ ನೀಡಿದರು. ಇಸ್ಮಾಯಿಲ್ ಝಬೀಹ್ ಅವರು ಡಿಸೆಂಬರ್‌ನಲ್ಲಿ ನಡೆಯಲಿರುವ ಕ್ವಿಝ್ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಅರಬಿ ಜುಮ್ಮಾ ಮಸೀದಿ ಖತೀಬ್ ಬರುವಾ ಸಅದಿ, ತವಕ್ಕಲ್ ಓವರ್‌ಸೀಸ್ ಸಂಸ್ಥಾಪಕ ಅಧ್ಯಕ್ಷ ವೈ.ಅಹ್ಮದ್ ಹಾಜಿ, ತವಕ್ಕಲ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಶಾಬಾನ್, ತವಕ್ಕಲ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕುಚ್ಚಿಕಾಡ್, ಖಜಾಂಚಿ ಅಹ್ಮದ್ ಗುಲಾಂ, ತವಕ್ಕಲ್ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ತವಕ್ಕಲ್ ಓವರ್‌ಸೀಸ್ ಅಧ್ಯಕ್ಷ ಮೊಹಮ್ಮದ್ ಅಶ್ಫಾಕ್, ತವಕ್ಕಲ್ ಅಧ್ಯಕ್ಷ ಅರ್ಷ್ ಇಬ್ರಾಹಿಂ, ಲಂಡನ್ ಅಮೇರಿಕನ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕಾಪು ಮೊಹಮ್ಮದ್, ಸಮಾಜಸೇವಕ ಹಾಗೂ ಉದ್ಯಮಿಗಳಾದ ತನ್ವೀರ್ ಅಹ್ಮದ್ ಮತ್ತು ಅರ್ಷದ್ ಫಾರೂಕಿ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.




ಡಿಸೆಂಬರ್‌ನಲ್ಲಿ ₹1 ಲಕ್ಷ ಬಹುಮಾನಗಳ ಕ್ವಿಝ್ ಸ್ಪರ್ಧೆ

ಕಾರ್ಯಕ್ರಮದಲ್ಲಿ ಡಿಸೆಂಬರ್‌ನಲ್ಲಿ ಅಲ್ಫಿಯಾ ಅಕಾಡೆಮಿ ವತಿಯಿಂದ ಕ್ವಿಝ್  ಸ್ಪರ್ಧೆ ಆಯೋಜಿಸುವುದಾಗಿ ಘೋಷಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹50 ಸಾವಿರ, ದ್ವಿತೀಯ ಬಹುಮಾನವಾಗಿ ₹30 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಫೈಝಲ್ ಇಸ್ಮಾಯಿಲ್ ಉಮ್ಮರ್ ಕಾರ್ಯಕ್ರಮ ನಿರೂಪಿಸಿದರು. 

For more information and enroll please register using this link

www.alfiyaacademy.com