ಯಶ್ಪಾಲ್ ಸುವರ್ಣ ಮಾಡಿರುವ ಭಾಷಣ ಭಯೋತ್ಪಾದಕ ಕೃತ್ಯ; ಯಶ್ಪಾಲ್ ರನ್ನು ಕೂಡಲೇ ಬಂಧಿಸಿ: ಸುಂದರ ಮಾಸ್ಟರ್ ಒತ್ತಾಯ

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾಡಿರುವ ಭಾಷಣ ಭಯೋತ್ಪಾದಕ ಕೃತ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಆರೋಪಿಸಿದ್ದಾರೆ. 

ಒಬ್ಬ ಜನಪ್ರತಿನಿಧಿಯಾಗಿ ಪುಡಿರೌಡಿಯ ಗೂಂಡಾ ವರ್ತನೆ ತೋರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಧಿಗೆ ತಕ್ಕುದಾದ ಲಕ್ಷಣಗಳಲ್ಲಾ.

ಹಾಗೆ ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುವಂತಾ ಕೆಲಸ ಮಾಡ್ತೇವೆ.... ಪ್ರಕಾಶ್ ರಾಜ್ ಅವರನ್ನು ಅರಬ್ಬೀ ಸಮುದ್ರಕ್ಕೆ ಹಾಕಿ ಮೀನಿಗೆ ಆಹಾರವಾಗುವ ಪರಿಸ್ಥಿತಿ ಬರಬಹುದು ಎನ್ನುವ ಮೂಲಕ ಕೊಲೆಯ ಸಂಚನ್ನು ರೂಪಿಸುವ ಎಚ್ಚರಿಕೆ ನೀಡಿದ್ದಾರೆ....... ಆದ್ದರಿಂದ ಯಶ್ಪಾಲ್ ಸುವರ್ಣನನ್ನು ಈ ಕೂಡಲೇ ಬಂಧಿಸಬೇಕು ಎಂದು ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್ ಒತ್ತಾಯಿಸಿದ್ದಾರೆ. 

ಮನುಷ್ಯನ ನಾಲಗೆ ಆತನ ಸಂಸ್ಕಾರ ಮತ್ತು ಆತನ ಇತಿಹಾಸವನ್ನು ಸೂಚಿಸುತ್ತದೆ ಎನ್ನುವುದು ಯಶ್ಪಾಲ್ ಸುವರ್ಣ ವಿಚಾರದಲ್ಲಿ ಅಕ್ಷರಶ ಸತ್ಯವಾಗಿದೆ.  ಈ ಜನಪ್ರತಿನಿಧಿ ಉಡುಪಿಯನ್ನು ಇನ್ನೊಂದು ಬಿಹಾರ ಅಥವಾ ಉತ್ತರಪ್ರದೇಶ ಮಾಡಲು ಹೊರಟಿದ್ದಾರೆ. ಉಡುಪಿಯ ವಿಧ್ಯಾರ್ಥಿಗಳು ಆನಕ್ಷರಸ್ಥರಲ್ಲಾ ಎಲವನ್ನೂ ತಿಳಿದುಕೊಳ್ಳುವ ಶಕ್ತಿ ಅವರಿಗಿದೆ...... ಈ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳೇ.... ತಾವು ಇವನ ಮಾತನ್ನು ಸಂಪೂರ್ಣ ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ಆತನಿಗೆ ತಕ್ಕ ಪಾಠಕಲಿಸುವ ಕೆಲಸ ಮಾಡಬೇಕು.ವಿದ್ಯಾರ್ಥಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದಂತಹ ಯಶ್ಪಾಲ್ ಗೆ ಸರಿಯಾದ ಉತ್ತರ ಕೊಡುವ ಕಾರ್ಯವನ್ನು ಈ ದೇಶದ ಭವಿಷ್ಯದ ಆಡಳಿತಗಾರರಾದ ತಾವು ಮಾಡಬೇಕೆಂದು ಸುಂದರ ಮಾಸ್ಟರ್ ಮನವಿ ಮಾಡಿದ್ದಾರೆ.

ಮತ್ತೆ ಡ್ರಗ್ಸ್ ದಂಧೆಯ ಸಂಪೂರ್ಣ ಮಾಹಿತಿಯ ಬಗ್ಗೆ  ಯಶ್ಪಾಲ್ ಸುವರ್ಣ ತಿಳಿಸಿರುವುದರಿಂದ ಕೂಡಲೇ ಯಶ್ಪಾಲ್ ಸುವರ್ಣನನ್ನು ಬಂಧಿಸಿ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯಬೇಕಾಗಿ ಅವರು ಆಗ್ರಹಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಇಂತಹ ಸಮಾಜಘಾತುಕ ಶಕ್ತಿಗಳು ಉಡುಪಿಯ ಸ್ವಾಸ್ತ್ಯ ಕೆಡಿಸುವ ಕೆಲಸ ಮಾಡಿದರೆ ಸಂವಿಧಾನ ಪರ ಸಂಘಟನೆಗಳು ಅನಿರ್ಧಿಷ್ಟಾವದಿ ಚಳುವಳಿ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್ ಎಚ್ಚರಿಕೆ ನೀಡಿದ್ದಾರೆ.